ಎಕೋಸ್ಪೇಸ್ ಪ್ರದೇಶದಲ್ಲಿರುವ ಐಟಿ ಟೆಕ್ ಪಾರ್ಕ್'ನಲ್ಲಿ ಈ ಘಟನೆ ನಡೆದಿದೆ. ಟೀಮ್ ಲೀಡರ್' ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಗಿ ಯುವತಿ ದೂರಿದ್ದಾರೆ.

ಬೆಂಗಳೂರು(ನ.28): ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಮಹಿಳಾ ಟೆಕ್ಕಿಗೆ ಸಹೋದ್ಯೋಗಿಯೇ ಲೈಂಗಿಕ ಕಿರುಕುಳ ನೀಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಎಕೋಸ್ಪೇಸ್ ಪ್ರದೇಶದಲ್ಲಿರುವ ಐಟಿ ಟೆಕ್ ಪಾರ್ಕ್'ನಲ್ಲಿ ಈ ಘಟನೆ ನಡೆದಿದೆ. ಟೀಮ್ ಲೀಡರ್' ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಗಿ ಯುವತಿ ದೂರಿದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಕೂಡ ಕಂಪನಿ ಆತನ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ವೆಂದು ಹೇಳಿದ್ದು, ಟೀಂ ಲೀಡರ್ ಧೀರಜ್ ಶೆಟ್ಟೆ ಎಂಬಾತನ ವಿರುದ್ಧ ಯುವತಿ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ.