ಹೊಸವರ್ಷದ ಬೆಳಗಿನ ಜಾವ ಸುಮಾರು 2:40ರ ಸಮಯದಲ್ಲಿ  ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ಒಬ್ಬಂಟಿಯಾಗಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು

ಬೆಂಗಳೂರು(ಜ.4): ಕಾಮುಕರ ದೌರ್ಜನ್ಯದ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾದ ಬಳಿಕ ಕಮ್ಮನಹಳ್ಳಿಯ ಇಬ್ಬರು ಸಂತ್ರಸ್ತ ಯುವತಿಯರು ನಾಪತ್ತೆಯಾಗಿದ್ದಾರೆ. ಈ ಯುವತಿಯರು ಯಾರೆಂಬದು ಈವರೆಗೂ ಪತ್ತೆಯಾಗಿಲ್ಲ. ಯುವತಿಯರ ಪತ್ತೆಗೆ ಬಾಣಸವಾಡಿ ಪೊಲೀಸರು ಮುಂದಾಗಿದ್ದಾರೆ. ಕಮ್ಮನಹಳ್ಳಿ 7ನೇ ಕ್ರಾಸ್​​​ನ ಮನೆಯೊಂದರಲ್ಲಿದ್ದ ಸಂತ್ರಸ್ತ ಯುವತಿಯರು ದೌರ್ಜನ್ಯದ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾದ ಬಳಿಕ ನಾಪತ್ತೆಯಾಗಿದ್ದಾರೆ.

ಹೊಸವರ್ಷದ ಬೆಳಗಿನ ಜಾವ ಸುಮಾರು 2:40ರ ಸಮಯದಲ್ಲಿ ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ಒಬ್ಬಂಟಿಯಾಗಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು . ಯುವತಿ ಇನ್ನೇನು ರಸ್ತೆ ಬದಿಯಲ್ಲಿದ್ದ ತನ್ನ ಮನೆಯೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ಆಕೆಯ ಮೇಲೆರಗಿ ಲೈಂಗಿಕ ಕಿರುಕುಳ ನೀಡಿದ್ದರು. ಆ ಯುವತಿ ಕೊಸರಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ರಸ್ತೆಯಲ್ಲಿ ಬಿಸಾಕಿ ಸವಾರರು ಪರಾರಿಯಾಗಿದ್ದರು.

ಘಟನೆನಡೆದಿದ್ದುಎಲ್ಲಿ :

5ನೇ ಮುಖ್ಯ ರಸ್ತೆ, 7ನೇ ಕ್ರಾಸ್​, HRBR ಲೇಔಟ್​, ಕಮ್ಮನಹಳ್ಳಿ

ರಾತ್ರಿ 1 ಗಂಟೆ : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಪಾರ್ಟಿ ಮುಗಿಸಿದ ಯುವತಿಯರು

ಮಧ್ಯರಾತ್ರಿ 1:30 : ಪಾರ್ಟಿ ಮುಗಿಸಿ ಆಟೋ ಹತ್ತಿದ ಇಬ್ಬರು ಯುವತಿಯರು

ಮಧ್ಯರಾತ್ರಿ 2: 40 ನಿಮಿಷ: HRBR ಲೇಔಟ್​ 5ನೇ ಮುಖ್ಯ ರಸ್ತೆ, 7ನೇ ಕ್ರಾಸ್​ನಲ್ಲಿ ಆಟೋ ನಿಲ್ಲಿಸಿದ ಯುವತಿಯರು

ಮಧ್ಯರಾತ್ರಿ 2 :40 ನಿಮಿಷ : ಮೊದಲು ಆಟೋ ಇಳಿದ ಯುವತಿ ಮನೆ ತಲುಪಿದಳು

ಮಧ್ಯರಾತ್ರಿ 2 :41 ನಿಮಿಷ : ಆಟೋ ಚಾಲಕನಿಗೆ ದುಡ್ಡು ಕೊಟ್ಟು ಇಳಿದ ಮತ್ತೊಬ್ಬ ಯುವತಿ

ಮಧ್ಯರಾತ್ರಿ 2 : 41 ನಿಮಿಷ 13 ಸೆಕೆಂಡ್ : ಆಕ್ಟಿವಾ ಹೋಂಡಾ ಗಾಡಿಯಲ್ಲಿ ಹಿಂಬಾಲಿಸಿ ಬಂದ ಇಬ್ಬರು ಕಾಮುಕರು

ಮಧ್ಯರಾತ್ರಿ 2 : 41 ನಿಮಿಷ 18 ಸೆಕೆಂಡ್​ : ಮತ್ತೊಂದು ದ್ವಿಚಕ್ರ ವಾಹನದಲ್ಲಿ ರಸ್ತೆಯಲ್ಲೇ ನಿಂತ ಮತ್ತಿಬ್ಬರು ಕಾಮುಕರು

ಮಧ್ಯರಾತ್ರಿ 2 : 41 ನಿಮಿಷ 25 ಸೆಕೆಂಡ್ : ದ್ವಿಚಕ್ರ ವಾಹನದಿಂದ ಇಳಿದು ಹುಡುಗಿಯನ್ನು ಅಡ್ಡಗಟ್ಟಿ ಅಪ್ಪಿ ಹಿಡಿದ ಹಿಂಸಿಸಿದ ಕಾಮುಕ

ಮಧ್ಯರಾತ್ರಿ 2 : 41 ನಿಮಿಷ 33 ಸೆಕೆಂಡ್ : ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬಂದ ಮತ್ತಿಬ್ಬರು ಕಾಮುಕರ ಗ್ಯಾಂಗ್​

ಮಧ್ಯರಾತ್ರಿ 2 : 41 ನಿಮಿಷ 37 ಸೆಕೆಂಡ್ : ಹುಡುಗಿಯನ್ನು ದ್ವಿಚಕ್ರ ವಾಹನದತ್ತ ಎಳೆದೊಯ್ದು ಹಿಂಸಿಸಿದ ಕಾಮುಕ

ಮಧ್ಯರಾತ್ರಿ 2 : 41 ನಿಮಿಷ 46 ಸೆಕೆಂಡ್ : ಹುಡುಗಿಯನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಲು ಯತ್ನಿಸಿದ ಕಾಮುಕರು

ಮಧ್ಯರಾತ್ರಿ 2 : 41 ನಿಮಿಷ 59 ಸೆಕೆಂಡ್ : ಯುವತಿ ತೀವ್ರ ಪ್ರತಿಯೋಧ ವ್ಯಕ್ತಪಡಿಸಿದ್ದರಿಂದ ಹುಡುಗಿಯನ್ನು ರಸ್ತೆ ಮೇಲೆ ತಳ್ಳಿ ಪರಾರಿಯಾದ ಕಾಮುಕರು