ಕ್ಯಾಲಿಫೋರ್ನಿಯಾ[ಮಾ.24]: ವಿವಿಧ ರಾಜಮನೆತನಕ್ಕೆ ಸೇರಿದ ಅಥವಾ ಆ ಕಾಲದಲ್ಲಿ ಬಳಕೆಯಾದ ಯುದ್ಧ ಸಾಮಗ್ರಿಗಳು, ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪಸರಿಸಲು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಡುವುದು ಗೊತ್ತೇ ಇದೆ.

ಆದರೆ, ಲೈಂಗಿಕ ಆಟಿಕೆಗಳಿಗಳನ್ನು ಮ್ಯೂಸಿಯಂನಲ್ಲಿಟ್ಟಿದ್ದಾರೆ ಎಂದರೆ ನಂಬಲು ಸಾಧ್ಯವೇ. ಆದರೆ, ಇದೇ ಸತ್ಯ. ಲೈಂಗಿಕ ತರಬೇತಿ ತಜ್ಞೆ ಜೋನಿ ಬ್ಲಾಂಕ್‌ ಎಂಬುವರಿಗೆ ಸೇರಿದ ಲೈಂಗಿಕ ಆಟಿಕೆಗಳನ್ನು ಸ್ಯಾನ್‌ಫ್ರಾನ್ಸಿಸ್ಕೋದ ಮ್ಯೂಸಿಯಂ ಒಂದರಲ್ಲಿ ಪ್ರದರ್ಶನಕ್ಕಿಡಲಾಗಿದೆಯಂತೆ.

ಲೈಂಗಿಕ ತರಬೇತಿ ತಜ್ಞೆಯಾಗಿದ್ದ ಬ್ಲಾಂಕ್‌ ಅವರು 2016ರಲ್ಲಿ ಸಾವನ್ನಪ್ಪಿದ್ದರು.