ಈ ಹಿಂದೆಯೂ ಈಕೆ ಹಲವು ಬಾರಿ ಬಂಧಿತಳಾದರೂ ಸಾಕ್ಷ್ಯಾಧಾರ ಕೊರತೆ ಕಾರಣ ಖುಲಾಸೆಯಾಗಿದ್ದಳು.
ನವದೆಹಲಿ(ಡಿ.26): ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ನೂಕುತ್ತಿದ್ದ ಕುಖ್ಯಾತ ವೇಶ್ಯಾವಾಟಿಕೆ ದಲ್ಲಾಳಿ ಗೀತಾ ಅರೋಡಾ ಅಲಿಯಾಸ್ ಸೋನು ಪಂಜಾಬನ್‌ಳನ್ನು ಸೋಮವಾರ ದಿಲ್ಲಿಯ ಮೆಹರೌಲಿಯಲ್ಲಿ ಸೋಮವಾರ ಬಂಧಿಸಲಾಗಿದೆ.
ಬಾಲಕಿಯರನ್ನು ಈಕೆಯ ಗ್ಯಾಂಗ್ ಅಪಹರಿಸುತ್ತಿತ್ತು ಮತ್ತು ಅವರಿಗೆ ಚೆನ್ನಾಗಿ ಇಂಗ್ಲಿಷ್ ಕಲಿಸಿ ‘ಹೈ-ಕ್ಲಾಸ್ ವೇಶ್ಯಾವಾಟಿಕೆ’ಗೆ ನೂಕುತ್ತಿತ್ತು. ದಿಲ್ಲಿ'ಯಲ್ಲಿ ಬೇನಾಮಿ ಹೆಸರಲ್ಲಿ ಹಲವು ಫ್ಲ್ಯಾಟ್‌ಗಳನ್ನು ಹೊಂದಿದ್ದ ಈಕೆ ತಾನು ಇಟ್ಟುಕೊಂಡಿದ್ದ ‘ಪಿಂಪ್’ಗಳ ಜಾಲದ ಮೂಲಕ ಶ್ರೀಮಂತ ಗಿರಾಕಿಗಳನ್ನು ಹುಡುಕುತ್ತಿದ್ದಳು.
ಈ ಹಿಂದೆಯೂ ಈಕೆ ಹಲವು ಬಾರಿ ಬಂಧಿತಳಾದರೂ ಸಾಕ್ಷ್ಯಾಧಾರ ಕೊರತೆ ಕಾರಣ ಖುಲಾಸೆಯಾಗಿದ್ದಳು. ಆದರೆ ಮತ್ತೆ ದಂಧೆ ಮುಂದುವರಿಸಿದ ಕಾರಣ ಸೋಮವಾರ ಗಿರಾಕಿಗಳ ವೇಷದಲ್ಲಿ ಹೋದ ಇಬ್ಬರು ಪೊಲೀಸರು ಸೋನುಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
