ಚಿತ್ರದುರ್ಗ(ಸೆ.27): ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಮೊದಲ ಕ್ರಾಸ್​ನಲ್ಲಿ ಮಹಿಳೆಯೊಬ್ಬಳ ವರ್ತನೆಗೆ ಬೇಸತ್ತ ಸ್ಥಳೀಯರು ಗಲಾಟೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಗೌರಮ್ಮ ಎಂಬುವವರ ಮನೆಯಲ್ಲಿ ಬಾಡಿಗೆ ಪಡೆದ ಮಹಿಳೆಯೊಬ್ಬಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಕುಡಿದ ಅಮಲಿನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಾಳೆ. ಮನೆಯಲ್ಲಿ ಬಾಡಿಗೆ ಇರುವ ಮಹಿಳೆ ವೇಶ್ಯಾವಾಟಿಕೆ ನಡೆಸುವುದರೊಂದಿಗೆ ತೀರ ಅಸಹ್ಯವಾಗಿ ಮಲಗಿರುತ್ತಾಳೆ. ಇಂತಹ ಮಹಿಳೆಯನ್ನು ಮನೆ ಖಾಲಿ ಮಾಡಿಸಿ ಎಂದರೆ ಗೌರಮ್ಮ ಖಾಲಿ ಮಾಡಿಸುತ್ತಿಲ್ಲ. ಇಂತಹ ಮಹಿಳೆಯಿಂದ ಸ್ಥಳೀಯರು ನೆಮ್ಮದಿಯಿಂದ ಬದುಕು ನಡೆಸಲು ಆಗುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ರಂಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.