ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಪತ್ರಕರ್ತ ವಿನೋದ್ ವರ್ಮಾ ವಿರುದ್ಧ ಕೇಸ್ ದಾಖಲಿಸಿ ಕೊಳ್ಳಲಾಗಿದೆ.
ಛತ್ತೀಸ್‌ಗಢ (ಅ.29): ರಾಸಲೀಲೆ ಸಿಡಿ ತೋರಿಸಿ ಛತ್ತೀ'ಸ್‌ಗಢದ ಸಚಿವರೊಬ್ಬರಿಗೆ ಬ್ಲಾಕ್‌ಮೇಲ್ ಮಾಡಿದ ಹಿರಿಯ ಪತ್ರಕರ್ತ ವಿನೋದ್ ವರ್ಮಾ ಬಂಧನ ಬೆನ್ನಲ್ಲೇ, ಇದೇ ಪ್ರಕರಣ ಸಂಬಂಧ ಛತ್ತೀಸ್‌ಗಢ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಘೇಲ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ರಾಸಲೀಲೆ ಸಿಡಿಯಲ್ಲಿ ತಮ್ಮ ಚಿತ್ರವನ್ನು ನಕಲು ಮಾಡಲಾಗಿದೆ ಎಂಬ ಲೋಕೋಪಯೋಗಿ ಸಚಿವ ರಾಜೇಶ್ ಮುನಾತ್ ಅವರ ದೂರಿನನ್ವಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಪತ್ರಕರ್ತ ವಿನೋದ್ ವರ್ಮಾ ವಿರುದ್ಧ ಕೇಸ್ ದಾಖಲಿಸಿ ಕೊಳ್ಳಲಾಗಿದೆ. ಈ ನಡುವೆ ಕೇಸನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ವಹಿಸಿದೆ.
