ಕರ್ನಾಟಕದ ಬಹುತೇಕ ಜಿಲ್ಲೆಗಳು ಭೀಕರ ಬರಗಾಲಕ್ಕೆ ತತ್ತರಿಸಿದೆ. ನದಿ, ಜಲಾಶಗಳು ಬತ್ತಿ ಹೋಗಿದೆ. ಕುಡಿಯಲು ನೀರು ಇಲ್ಲದಾಗಿದೆ. ಚಿಕ್ಕೋಡಿ-ದಾವಣೆಗೆರೆಯ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಉತ್ತರ ಕರ್ನಾಟಕದ ಜೀವ ನದಿ ಕೃಷ್ಣಾ ನೀರಿಲ್ಲದೆ ಬತ್ತಿ ಹೋಗಿದೆ. ಹೀಗಾಗಿ ಚಿಕ್ಕೋಡಿಯ ಬೆಳೆಗಳು ಒಣಗಿ ಹೋಗಿದೆ. ಹೀಗಾಗಿ ಇಲ್ಲಿನ ಜನರಿಗೆ ಕೆಲಸವೂ ಇಲ್ಲ, ಒಪ್ಪೊತ್ತಿನ ಊಟವೂ ಇಲ್ಲ, ಕುಡಿಯಲು ನೀರೂ ಕೂಡ ಇಲ್ಲ.

"

ನೀರಿಗಾಗಿ ಅಲೆದಾಟ ಶುರುವಾಗಿದೆ. ಇದೀಗ ಒಂದು ಹೊತ್ತಿನ ಊಟಕ್ಕಾಗಿ ಇದೀಗ ನದಿಯಲ್ಲಿನ ಒಡಲು ಅಗೆದು ತುತ್ತು ಅನ್ನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇತ್ತ ದಾವಣೆಗೆರೆಯಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದೆ.