ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ವಲಸಿಗರನ್ನು ಗುರುವಾರ ಮ್ಯಾನ್ಮಾರ್‌ಗೆ ಗಡೀಪಾರು ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ 7 ಮಂದಿ ರೋಹಿಂಗ್ಯಾ ವಲಸಿಗರನ್ನು ಗುರುವಾರ ಮ್ಯಾನ್ಮಾರ್‌ಗೆ ಗಡೀಪಾರು ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 ಭಾರತದಿಂದ ರೋಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡುತ್ತಿರುವುದು ಇದೇ ಮೊದಲು. ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು, ‘ಮಣಿಪುರದ ಮೊರೆಹ್‌ ಎಂಬ ಗಡಿ ಪ್ರದೇಶದಲ್ಲಿ 7 ಮಂದಿ ಅಕ್ರಮ ವಲಸಿಗರನ್ನು ಮ್ಯಾನ್ಮಾರ್‌ ಸರ್ಕಾರದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ,’ ಎಂದು ಹೇಳಿದರು. 

2012ರಲ್ಲಿ ಪೊಲೀಸರಿಂದ ಬಂಧನವಾಗಿದ್ದ 7 ಮಂದಿ ರೋಹಿಂಗ್ಯಾ ವಲಸಿಗರು, ಅಸ್ಸಾಂನ ಸಿಲ್ಚಾರ್‌ನಲ್ಲಿರುವ ಸೆರೆವಾಸ ಕೇಂದ್ರದಲ್ಲೇ ಇದ್ದರು. ವಿಶ್ವಸಂಸ್ಥೆ ಗುರುತಿಸಿದ 14000ಕ್ಕೂ ಹೆಚ್ಚು ಮಂದಿ ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲೇ ನೆಲೆಸಿದ್ದಾರೆ ಎಂದು ಕಳೆದ ವರ್ಷವಷ್ಟೇ ಭಾರತ ಸರ್ಕಾರ ಸಂಸತ್ತಿಗೆ ತಿಳಿಸಿತ್ತು.