ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ತಿಂದದ್ದು ಸಂತೃಪ್ತಿಯಾಗಲಿ ಬಿಡಲಿ ಆದರೆ ಸರ್ವಿಸ್ ಚಾರ್ಜಸ್ ಅಂತ ಹೋಟೆಲ್, ರೆಸ್ಟೋರೆಂಟ್ ನವರು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದಕ್ಕೆ ಕಡಿವಾಣ ಬಿದ್ದಿದೆ.  ಸರ್ವಿಸ್ ಚಾರ್ಜನ್ನು ಕೊಡುವುದು ಕಡ್ಡಾಯವಲ್ಲ, ಕೊಡುವುದು ಬಿಡುವುದು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರ ಹೇಳಿದೆ.

ನವದೆಹಲಿ (ಡಿ. 02): ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ತಿಂದದ್ದು ಸಂತೃಪ್ತಿಯಾಗಲಿ ಬಿಡಲಿ ಆದರೆ ಸೇವಾ ಶುಲ್ಕ (ಸರ್ವಿಸ್ ಚಾರ್ಜಸ್) ಅಂತ ಹೋಟೆಲ್, ರೆಸ್ಟೋರೆಂಟ್ ನವರು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದಕ್ಕೆ ಕಡಿವಾಣ ಬಿದ್ದಿದೆ. ಸರ್ವಿಸ್ ಚಾರ್ಜನ್ನು ಕೊಡುವುದು ಕಡ್ಡಾಯವಲ್ಲ, ಕೊಡುವುದು ಬಿಡುವುದು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರ ಹೇಳಿದೆ.

ಟಿಪ್ಸನ್ನು ಹೊರತುಪಡಿಸಿ ಶೇ. 5 ರಿಂದ 20 ರಷ್ಟು ಸೇವಾ ಶುಲ್ಕ ಬಿಲ್ ಗೆ ಸೇರುತ್ತಿತ್ತು. ಈ ರೀತಿ ಗ್ರಾಹಕರಿಂದ ಹಣ ಕೀಳುವುದು ನ್ಯಾಯೋಚಿತ ವ್ಯಾಪಾರವಲ್ಲ. ಹಾಗಾಗಿ ಇನ್ಮುಂದೆ ಸೇವಾ ಶುಲ್ಕ ಕೊಡುವುದು ಕಡ್ಡಾಯವಲ್ಲ. ಗ್ರಾಹಕರ ವಿವೇಚನೆಗೆ ಬಿಟ್ಟದ್ದು ಎಂದು ಸರ್ಕಾರ ಹೇಳಿದೆ.

ಈ ಸುತ್ತೋಲೆಯನ್ನು ಎಲ್ಲಾ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಸೂಕ್ತವಾದ ಸ್ಥಳದಲ್ಲಿ ಗ್ರಾಹಕರಿಗೆ ಕಾಣುವಂತೆ ಹಾಕಬೇಕು. ಸರ್ವಿಸ್ ಚಾರ್ಜಸ್ ಕೊಡುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಒಂದುವೇಳೆ ಗ್ರಾಹಕರು ಸೇವೆಯಿಂದ ಅಸಂತೃಪ್ತಿಗೊಂಡಿದ್ದರೆ ಕೊಡುವ ಅಗತ್ಯವಿಲ್ಲ ಎಂದು ಗ್ರಾಹಕ ವ್ಯವಹಾರ ಇಲಾಖೆ ಹೇಳಿದೆ.