ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಆಸ್ಪತ್ರೆ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ. ದಾವಣಗೆರೆಯಲ್ಲಿರೋ ಶ್ಯಾಮನೂರು ಶಿವಶಂಕರಪ್ಪ ಒಡೆತನದ ಎಸ್ಎಸ್ ಹೈಟೆಕ್ ಆಸ್ಪತ್ರೆಯ ವೈದ್ಯರ ವಿರುದ್ಧ ಕಿಡ್ನಿ ಕಳವು ಆರೋಪ ಮಾಡಿ ದಾವಣಗೆರೆ ಮೂಲದ ಮಂಜುನಾಥ ಸ್ವಾಮಿ ಎಂಬುವವರು ಎಸ್ಎಸ್ ಆಸ್ಪತ್ರೆ ವಿರುದ್ದ ದೂರು ದಾಖಲಿಸಿದ್ದಾರೆ.
ಬೆಂಗಳೂರು(ಅ.13): ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಆಸ್ಪತ್ರೆ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ. ದಾವಣಗೆರೆಯಲ್ಲಿರೋ ಶ್ಯಾಮನೂರು ಶಿವಶಂಕರಪ್ಪ ಒಡೆತನದ ಎಸ್ಎಸ್ ಹೈಟೆಕ್ ಆಸ್ಪತ್ರೆಯ ವೈದ್ಯರ ವಿರುದ್ಧ ಕಿಡ್ನಿ ಕಳವು ಆರೋಪ ಮಾಡಿ ದಾವಣಗೆರೆ ಮೂಲದ ಮಂಜುನಾಥ ಸ್ವಾಮಿ ಎಂಬುವವರು ಎಸ್ಎಸ್ ಆಸ್ಪತ್ರೆ ವಿರುದ್ದ ದೂರು ದಾಖಲಿಸಿದ್ದಾರೆ.
ದೂರುದಾರ ಮಂಜುನಾಥ್ ಸ್ವಾಮಿ ಎಂಬುವವರು ತನ್ನ 9 ವರ್ಷದ ಮಗ ಚಿರಂತನನ್ನ ಜ್ವರ ಬಂದ ಕಾರಣ 2016 ರಲ್ಲಿ ದಾವಣಗೆರೆಯಲ್ಲಿರೋ ಎಸ್'ಎಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿದ್ದಾರಂತೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಚಿರಂತನ ಸಾವಪ್ಪಿರುತ್ತಾನೆ . ಆದ್ರೆ ಮರಣೋತ್ತರ ಪರೀಕ್ಷೆಯಾದ ನಂತದ ತನ್ನ ಮಗನ ಆಪರೇಷನ್ ಮಾಡಿ ತನ್ನ ಮಗನ ಕಿಡ್ನಿಯನ್ನ ವೈಧ್ಯರು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಮಂಜುನಾಥ್ ಸ್ವಾಮಿ ಪೊಲೀಸ್ ಠಾಣೆಗೆ ದೂರನ್ನ ನೀಡಿದ್ದಾರೆ.
ಆದರೆ ಪೊಲೀಸ್ ಠಾಣೆಯಿಂದ ಸೂಕ್ತ ನ್ಯಾಯ ಸಿಗದ ಕಾರಣ ಮಂಜುನಾಥ್ ಎಸಿಬಿ ಮೆಟ್ಟಿಲೇರಿದ್ದಾರೆ.
