ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಮಾಗಡಿ ತಾಲೂಕಿನ ಸೋಲೂರು ಬಳಿ ಸಂಭವಿಸಿದ ಅಪಘಾತವೊಂದು ಸಂಭವಿಸಿದ್ದು, ಈ ದುರಂತದಲ್ಲಿ ತ್ರಿವೇಣಿ ಸಂಗಮ, ಮಧುಬಾಲಾ, ಮಹಾನದಿ ಧಾರವಾಹಿಗಳಲ್ಲಿ ನಟಿಸಿದ್ದ ನಟಿ ರಚನಾ ಹಾಗೂ ಸಹನಟ ಜೀವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರು(ಆ.24): ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಮಾಗಡಿ ತಾಲೂಕಿನ ಸೋಲೂರು ಬಳಿ ಸಂಭವಿಸಿದ ಅಪಘಾತವೊಂದು ಸಂಭವಿಸಿದ್ದು, ಈ ದುರಂತದಲ್ಲಿ ತ್ರಿವೇಣಿ ಸಂಗಮ, ಮಧುಬಾಲಾ, ಮಹಾನದಿ ಧಾರವಾಹಿಗಳಲ್ಲಿ ನಟಿಸಿದ್ದ ನಟಿ ರಚನಾ ಹಾಗೂ ಸಹನಟ ಜೀವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಚನಾ ಮತ್ತು ಜೀವನ್, ನಟ ಕಾರ್ತಿಕ್ ಹುಟ್ಟುಹಬ್ಬದ ನಿಮಿತ್ತ ದೇವರ ದರ್ಶನಕ್ಕೆ ತನ್ನ ಸ್ನೇಹಿತರೊಂದಿಗೆ ಕುಕ್ಕೆ ಸುಬ್ರಮಣ್ಯಕ್ಕೆ ಸಫಾರಿ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ರಾತ್ರಿ ಸುಮಾರು 2 ಗಂಟೆಗೆ ಮಾಗಡಿ ತಾಲೂಕಿನ ಸೋಲೂರು ಬಳಿ ರಸ್ತೆಯಲ್ಲಿ ನಿಂತಿದ್ದ ಕ್ಯಾಂಟರ್‌'ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ನಟಿ ರಚನಾ ಮತ್ತು ಸಹನಟ ಜೀವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನು ಈ ದುರಂತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಿ ಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್ ಎಂಬ ಸಹ ನಟರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತ್ರಿವೇಣಿ ಸಂಗಮ, ಮಧುಬಾಲಾ, ಮಹಾನದಿ, ಧಾರವಾಹಿಗಳಲ್ಲಿ ನಟಿ ರಚನಾ ಮುಖ್ಯ ಭೂಮಿಕೆಯನ್ನು ನಿಭಾಯಿಸುತ್ತಿದ್ದರು.