ಕಾಶ್ಮೀರದ ಉಗ್ರರ ಚುಟುವಟಿಕೆಗೆ ಹಣ ಪೂರೈಕೆ ಮಾಡುತ್ತಿರುವ ಪಾಕಿಸ್ತಾನದ ಹವಾಲಾ ಹಣ ವರ್ಗಾವಣೆ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ಪ್ರತ್ಯೇಕತಾವಾದಿ ಮುಖಂಡ ಶಬ್ಬೀರ್ ಶಾ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ನವದೆಹಲಿ: ಕಾಶ್ಮೀರದ ಉಗ್ರರ ಚುಟುವಟಿಕೆಗೆ ಹಣ ಪೂರೈಕೆ ಮಾಡುತ್ತಿರುವ ಪಾಕಿಸ್ತಾನದ ಹವಾಲಾ ಹಣ ವರ್ಗಾವಣೆ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ಪ್ರತ್ಯೇಕತಾವಾದಿ ಮುಖಂಡ ಶಬ್ಬೀರ್ ಶಾ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ಈ ಮೂಲಕ ಪಾಕಿಸ್ತಾನದ ಉಗ್ರರ ಜತೆ ಪ್ರತ್ಯೇಕತಾವಾದಿಗಳು ಸಂಪರ್ಕ ಹೊಂದಿದ್ದು ಸಾಬೀತಾಗಿದೆ.
ಜಾರಿ ನಿರ್ದೇಶನಾಲಯ (ಇ.ಡಿ.) ಶಬ್ಬೀರ್ ಶಾ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು, 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಜೊತೆ ನಿರಂತರ ಸಂಪರ್ಕ ಹೊಂದಿದ್ದೆ ಮತ್ತು ಜನವರಿಯಲ್ಲಿ ಮಾತುಕತೆ ನಡೆಸಿದ್ದೆ ಎಂದು ಶಾ ಒಪ್ಪಿಕೊಂಡಿದ್ದಾನೆ.
