ಮಂಗಳವಾರ ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳ ಷೇರುಪೇಟೆ ಭಾರೀ ಕುಸಿತ ಕಂಡ ಬೆನ್ನಲ್ಲೇ, ಇಂದು ಭಾರತ ಸೇರಿ ವಿಶ್ವದ ಇತರೆ ಮಾರುಕಟ್ಟೆಗಳು ತುಸು ಏರಿಕೆ ಕಂಡಿದೆ. ಭಾರತೀಯ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು ತುಸು ಸುಧಾರಿಸಿಕೊಂಡಿದೆ. 

ಮುಂಬೈ: ಮಂಗಳವಾರ ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳ ಷೇರುಪೇಟೆ ಭಾರೀ ಕುಸಿತ ಕಂಡ ಬೆನ್ನಲ್ಲೇ, ಇಂದು ಭಾರತ ಸೇರಿ ವಿಶ್ವದ ಇತರೆ ಮಾರುಕಟ್ಟೆಗಳು ತುಸು ಏರಿಕೆ ಕಂಡಿದೆ. ಭಾರತೀಯ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು ತುಸು ಸುಧಾರಿಸಿಕೊಂಡಿದೆ. 

ಮಂಗಳವಾರ ಡಾಲರ್ ಎದುರು ರುಪಾಯಿ ಮೌಲ್ಯ 64.24 ರೂ. ಇದ್ದರೆ, ಇಂದು ಇದರ ಮೌಲ್ಯ 64.05 ರೂ. ಆಗಿದೆ.

ವಿಶ್ವದೆಲ್ಲೆಡೆ ನಿನ್ನೆ ಷೇರುಪೇಟೆ ಕುಸಿದ ಪರಿಣಾಮ, ವಿಶ್ವದ ಟಾಪ್‌ 500 ಶ್ರೀಮಂತರ ಆಸ್ತಿ ಒಂದೇ ದಿನದಲ್ಲಿ 7 ಲಕ್ಷ ಕೋಟಿ ರು.ನಷ್ಟು ಕುಸಿದಿತ್ತು. ಇದೇ ವೇಳೆ ವಿಶ್ವದ ಭಾರೀ ಶ್ರೀಮಂತರ ಪೈಕಿ ಒಬ್ಬರಾದ, ಹೂಡಿಕೆ ತಜ್ಞ ವಾರೆನ್‌ ಬಫೆಟ್‌ ಅವರ ಆಸ್ತಿ ಒಂದೇ ದಿನದಲ್ಲಿ 33000 ಕೋಟಿ ರು.ಗೂ ಹೆಚ್ಚು ಇಳಿಕೆಯಾಗಿದೆ.