ನವದೆಹಲಿ [ಜು. 04]   ರಾಜ್ಯ ಸರಕಾರ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೆ. ಕಾಂಗ್ರೆಸ್ ನಲ್ಲಿ ಕೆಲ ಮುಖಂಡರಿಗೆ ಪ್ರಾಧಾನ್ಯತೆ ಕೊಡದೆ ಇರುವುದು ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಎರಡನೇ ಹಂತದ ನಾಯಕರನ್ನು ಬೆಳಸದೆ ಇರುವುದೂ ಕಾಂಗ್ರೆಸ್  ಹಿಂದೆ ಬೀಳಲು ಕಾರಣವಾಯಿತು ಎಂದು ಕಾಂಗ್ರೆಸ್ ಹಿರಿಯ ನಾಯಕ  ನಾಯಕ  ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ನನ್ನ ಸೋಲಿಗೆ ಜಿಲ್ಲೆಯ ಕೆಲ ಕಾಂಗ್ರೆಸ್ ‌ಮುಖಂಡರೇ ಕಾರಣ ಈ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದೇನೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

ಮಂತ್ರಿ ಮಂಡಲ ರಚನೆ ಸಂದರ್ಭದಲ್ಲಿ ಏಕ ಮಾನದಂಡ ವನ್ನು ಅನುಸರಿಸಿಲ್ಲ. ರೋಶನ್ ಬೇಗ್, ಎಚ್ .ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಬೇರೆಯವರನ್ನು ಮಂತ್ರಿ ಮಾಡಲಾಗಿದೆ. ಇದೇ ಗೊಂದಲಕ್ಕೆ ಕಾರಣ ಎಂದು ಮುನಿಯಪ್ಪಹೇಳಿದ್ದಾರೆ.