ರಾಮಮಂದಿರ ನಿರ್ಮಾಣಕ್ಕೆ ಶಪಥ: ವಿವಾದದಲ್ಲಿ ಹಿರಿಯ ಐಪಿಎಸ್​ ಅಧಿಕಾರಿ!

First Published 2, Feb 2018, 8:29 PM IST
Senior IPS Officer in Ram Mandir Pledge Controversy
Highlights
  • ಉತ್ತರ ಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿಯಿಂದ ‘ರಾಮ ಮಂದಿರ’ ಕಟ್ಟುವ ಶಪಥ
  • ಹಿಂದೂಗಳು ನ್ಯಾಯಾಲಯಗಳ ತೀರ್ಪಿಗೆ ಕಾಯದೇ, ಖುದ್ದಾಗಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂದು

ಲಕ್ನೋ: ಉತ್ತರ ಪ್ರದೇಶದ ಹಿರಿಯ ಐಪಿಎಸ್​ ಅಧಿಕಾರಿಯೊಬ್ಬರು ‘ರಾಮ ಮಂದಿರ’ ನಿರ್ಮಿಸುವ ಶಪಥ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಗೃಹ ರಕ್ಷಕ ದಳದ ಮಹಾ ನಿರ್ದೇಶಕರಾಗಿರುವ ಸೂರ್ಯ ಕುಮಾರ್ ಶುಕ್ಲಾ ಎಂಬವರು , ‘ನಾವು ರಾಮ ಭಕ್ತರು ಆದಷ್ಷು ಬೇಗ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಪ್ರತಿಜ್ಞೆ ಮಾಡತ್ತೇವೆ’ ಎನ್ನುವ ವಿಡಿಯೋ ಬಹಿರಂಗವಾಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಲಕ್ನೋ ವಿವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಹಿಂದೂಗಳು ನ್ಯಾಯಾಲಯಗಳ ತೀರ್ಪಿಗೆ ಕಾಯದೇ, ಖುದ್ದಾಗಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂದು ಶುಕ್ಲಾ ಹೇಳಿದ್ದಾರೆನ್ನಲಾಗಿದೆ.

ಹಿಂದೂಗಳು ಜಾಗೃತರಾಗಬೇಕು. ನೂರು ಕೋಟಿ ಜನಸಂಖ್ಯೆಯಿದ್ದರೂ ರಾಮ ಮಂದಿರ ನಿರ್ಮಿಸಲು ಸಾಧ್ಯವಾಗದಿರುವುದು ನಾಚಕೆಯ ವಿಷಯವೆಂದು, ಶುಕ್ಲಾ ಹೇಳಿದ್ದಾರೆ.

loader