Asianet Suvarna News Asianet Suvarna News

ರಾಹುಲ್ ಗಾಂಧಿ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಹೋಗ್ತಾರಾ , ಇಲ್ವಾ ?

ಸಂಘ ಒಂದು ವಿಷ ಇದ್ದ ಹಾಗೆ. ನನ್ನ ವೈಯಕ್ತಿಕ ಮನವಿ ಏನಂದರೆ ರಾಹುಲ್ ಗಾಂಧಿಯವರು ಈ ವಿಷವನ್ನು ರುಚಿ ನೋಡುವ ಪ್ರಯತ್ನ ಮಾಡಬಾರದು

Senior Congress leaders advise Rahul Gandhi to not attend RSS event in Delhi: Sources
Author
Bengaluru, First Published Aug 30, 2018, 8:12 PM IST

ನವದೆಹಲಿ[ಆ.30]: ಕಾಂಗ್ರೆಸಿನಿಂದ ಈಗಾಗಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈಗಾಗಲೇ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಸಂಘ ಪರಿವಾರದ ಕಟ್ಟಾ ವಿರೋಧಿಯಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗುವ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಾರೆ ಎನ್ನುವ ಸುದ್ದಿಗಳು ಕೆಲವು ದಿನಗಳಿಂದ ಹರಿದಾಡುತ್ತಿವೆ.

ಸೆಪ್ಟೆಂಬರ್ ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಆದರೆ ಭೇಟಿ ಕುರಿತು ಎರಡೂ ಕಡೆಯಿಂದ ಅಧಿಕೃತ ಮಾಹಿತಿಗಳಿಲ್ಲ. ಕೆಲವು ಸಂಘ ಪರಿವಾರದ ವಕ್ತಾರರು ರಾಹುಲ್ ಗಾಂಧಿ ಭೇಟಿ ನೀಡುವುದು ಅಂತೆಕಂತೆ ಅಷ್ಟೆ ಎಂದು ಸ್ಪಷ್ಟಿಕರಣ ನೀಡಿದ್ದರು.

ಖರ್ಗೆ ವಿರೋಧ
ಸ್ವತಃ ಕಾಂಗ್ರೆಸಿನ ಹಿರಿಯ ನಾಯಕ ಹಾಗೂ ಲೋಕಸಭೆಯ  ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ  ಖರ್ಗೆ ಅವರು ಈ ಬಗ್ಗೆ ಮಾತನಾಡಿ, ಆರ್ ಎಸ್ ಎಸ್ ಆಹ್ವಾನವನ್ನು ರಾಹುಲ್ ಗಾಂಧಿಯವರು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಸಂಘ ಒಂದು ವಿಷ ಇದ್ದ ಹಾಗೆ. ನನ್ನ ವೈಯಕ್ತಿಕ ಮನವಿ ಏನಂದರೆ ರಾಹುಲ್ ಗಾಂಧಿಯವರು ಈ ವಿಷವನ್ನು ರುಚಿ ನೋಡುವ ಪ್ರಯತ್ನ ಮಾಡಬಾರದು ಎಂದು ಹೋಗುವ ಬಗ್ಗೆ ಖಡಾಖಂಡಿತವಾಗಿ ವಿರೋಧ ವ್ಯಕ್ತ ಪಡಿಸಿದರು.

ಸ್ವತಃ ರಾಹುಲ್ ಗಾಂಧಿಯವರೆ ಲಂಡನ್ ನಲ್ಲಿನ ಕಾರ್ಯಕ್ರಮವೊಂದರಲ್ಲಿ ಆರ್ ಎಸ್ ಎಸ್ ಅನ್ನು ಮುಸ್ಲಿಂ ಬ್ರದರ್ ಹುಡ್'ಗೆ ಹೋಲಿಸಿದ್ದರು. ಜರ್ಮನಿಯ ಬರ್ಲಿನ್ ನಲ್ಲಿ ಮಾತನಾಡುತ್ತ ಆರ್ ಎಸ್ ಎಸ್ ಮತ್ತು ಬಿಜೆಪಿ ದೇಶವನ್ನು ಒಡೆದು ಆಳುತ್ತಿವೆ. ದೇಶದಲ್ಲಿ ರೈತರ ಮತ್ತು ಯುವಕರ ದುಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದ್ದರು. 

 

Follow Us:
Download App:
  • android
  • ios