ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಣಬ್ ಮುಖರ್ಜಿಗೆ ಕಾಂಗ್ರೆಸ್ ನಾಯಕರಿಂದ ಬೆಂಬಲ

Senior Congress leader supports Pranab Mukherjee's decision to attend RSS event
Highlights

 ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ  ಪಾಲ್ಗೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ. 
 

ನವದೆಹಲಿ : ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ  ಪಾಲ್ಗೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ. 

ಅವರು ಆಹ್ವಾನ ಸ್ವೀಕರಿಸಿರುವುದು ತಪ್ಪಲ್ಲ, ಅವರೋರ್ವ ಜಾತ್ಯಾತೀತವಾದಿ ಹಾಗೂ ಅತ್ಯಂತ ಮೇದಾವಿ ವ್ಯಕ್ತಿತ್ವವನ್ನು ಹೊಂದಿದವರು ಎಂದು ಹೇಳಿದ್ದಾರೆ. 

ಜಾತ್ಯಾತೀತವಾದಿಯಾದ ಅವರು ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವುದು ಅತೀ ಅವಶ್ಯಕ.  ಅವರ ಆಲೋಚನಾ ಕ್ರಮಗಳು ಹಾಗೂ ಅವರ ಮಾತುಗಳಿಂದ ಆರ್ ಎಸ್ ಎಸ್ ನಲ್ಲಿ ಕೆಲವು ಸುಧಾರಣೆ ಕಂಡು ಬರಬಹುದು ಎಂದಿದ್ದಾರೆ. 

7 ರಂದು ನಾಗ್ ಪುರದಲ್ಲಿ   ಆರ್ ಎಸ್ ಎಸ್  ಕಾರ್ಯಕರ್ತರ ಸಭೆ ನಡೆಯಲಿದ್ದು, ಪ್ರಣಬ್ ಮುಖರ್ಜಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು  ಆರ್ ಎಸ್ ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

loader