ಹಿರಿಯ ನಾಗರಿಕರು ಅಥವಾ 70 ವರ್ಷ ಮೀರಿದ ವೃದ್ಧರು ಮತ್ತು ದಿವ್ಯಾಂಗರ ಸಮಸ್ಯೆಗಳನ್ನು ಅರಿತಿರುವ ಆರ್‌ಬಿಐ, ಡಿ.31ರ ಒಳಗೆ ವೃದ್ಧರು ಮತ್ತು ದಿವ್ಯಾಂಗರಿಗೆ ಅನುಕೂಲವಾಗುವ ರೀತಿ ಅವರ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ನೀಡುವಂತೆ ಎಲ್ಲ ಬ್ಯಾಂಕ್‌ಗಳಿಗೂ ಸೂಚಿಸಿದೆ.
ಮುಂಬೈ: ಹಿರಿಯ ನಾಗರಿಕರು ಅಥವಾ 70 ವರ್ಷ ಮೀರಿದ ವೃದ್ಧರು ಮತ್ತು ದಿವ್ಯಾಂಗರ ಸಮಸ್ಯೆಗಳನ್ನು ಅರಿತಿರುವ ಆರ್ಬಿಐ, ಡಿ.31ರ ಒಳಗೆ ವೃದ್ಧರು ಮತ್ತು ದಿವ್ಯಾಂಗರಿಗೆ ಅನುಕೂಲವಾಗುವ ರೀತಿ ಅವರ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ನೀಡುವಂತೆ ಎಲ್ಲ ಬ್ಯಾಂಕ್ಗಳಿಗೂ ಸೂಚಿಸಿದೆ.
ಈ ಬಗ್ಗೆ ಗುರುವಾರ ಸೂಚನೆ ಹೊರಡಿಸಿರುವ ಆರ್ಬಿಐ, ‘ಹಿರಿಯ ನಾಗರಿಕರು, ದೃಷ್ಟಿ ಹೀನರು ಮತ್ತು ನಡೆಯಲು ಕಷ್ಟಕರವಾದ ದಿವ್ಯಾಂಗರಿಗೆ ಅಗತ್ಯವಿರುವ ಹಣ, ಚೆಕ್ಬುಕ್ ಮತ್ತು ಡಿಡಿಗಳನ್ನು ಅವರ ಮನೆ ಬಾಗಿಲಿಗೇ ತೆಗೆದುಕೊಂಡು ಹೋಗಬೇಕು. ಈ ನಿಯಮಗಳನ್ನು ಡಿ.31ರೊಳಗೆ ಅನುಷ್ಠಾನಗೊಳಿಸಬೇಕು. ಅಲ್ಲದೆ, ಈ ಬಗ್ಗೆ ಬ್ಯಾಂಕ್ ಶಾಖೆ ಮತ್ತು ವೆಬ್ಸೈಟ್ಗಳ ಮೂಲಕ ಹೆಚ್ಚು ಜನಪ್ರಿಯತೆ ನೀಡಬೇಕು ಸೂಚಿಸಲಾಗಿದೆ.
