ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಯಿಸಿರುವ ಚೇತನ್ ರಾಮ್, ಖ್ಯಾತ ಚಿತ್ರ ನಟರಾದ ವಿಷ್ಣುವರ್ಧನ್, ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾರೆ.

ಮೈಸೂರು (ಡಿ.24): ಕನ್ನಡ ಚಿತ್ರರಂಗದ ಹಿರಿಯ ನಟ ಚೇತನ ರಾಮ್ (72) ಕಳೆದ ರಾತ್ರಿ ಮೈಸೂರಿನಲ್ಲಿ ನಿಧನಹೊಂದಿದ್ದಾರೆ.

ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಯಿಸಿರುವ ಚೇತನ್ ರಾಮ್, ಖ್ಯಾತ ಚಿತ್ರ ನಟರಾದ ವಿಷ್ಣುವರ್ಧನ್, ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾರೆ.

ಕಳೆದ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವ ಚೇತನ್ ರಾಮ್ ಅವರ ಪಾರ್ಥೀವ ಶರೀರವನ್ನು ಟಿ.ಕೆ. ಲೇಔಟ್ ಮನೆಯಲ್ಲಿ ಅಂತಿಮ ದರ್ಶನಕ್ಕಿಡಲಾಗಿದೆ.

ಬಳಿಕ ಚಾಮುಂಡಿಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ಎರಡು ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹಲವರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.