ಬೆಂಗಳೂರು [ಜು27]: ಬೆಂಗಳೂರಿನಲ್ಲಿರುವ ಅಕ್ರಮ ವಾಗಿ ನೆಲೆಸಿರುವ ಬಾಂಗ್ಲಾ ನುಸುಳಿಕೋರರನ್ನು ಪತ್ತೆ ಹಚ್ಚಿ ವಾಪಸ್ ಕಳಿಸಿದರೆ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು. ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಆಕ್ಟ್ ಇಂಡಿಯಾ ಫೌಂಡೇಷನ್ ಶುಕ್ರವಾರ ಸೌತ್ಎಂಡ್‌ನಿಂದ ಜಯನಗರ ಶಾಪಿಂಗ್ಕಾಂಪ್ಲೆಕ್ಸ್‌ವರೆಗೂ ಹಮ್ಮಿಕೊಂಡಿದ್ದ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ರಮ ನುಸುಳಿಕೋರರನ್ನು ಪತ್ತೆ ಹಚ್ಚಿದರೆ ದೇಶದ ಹಿತದೃಷ್ಟಿಯಿಂದಲೂ ರಕ್ಷಣೆ ದೊರೆಯಲಿದೆ ಎಂದು ಹೇಳಿದರು.

ನಿವೃತ್ತ ಏರ್ ಮಾರ್ಷಲ್ ಬಿ.ಕೆ.ಮುರಳಿ ಮಾತನಾಡಿ, ಕಾರ್ಗಿಲ್ ಯುದ್ಧದ ಸನ್ನಿವೇಶ ಗಳು, ಯುದ್ಧಭೂಮಿ ಹೋರಾಟಗಳು, ಸೈನಿಕರ ಶೌರ್ಯ-ಸಾಹಸಗಳನ್ನು ಎಳೆಎಳೆಯಾಗಿ ವಿವರಿಸಿದರು. ಕಾರ್ಗಿಲ್ ಯುದ್ಧ ನಡೆದ 20 ವರ್ಷಗಳಾಗಿವೆ. ಪ್ರಾಣವನ್ನು ಪಣಕ್ಕಿಟ್ಟು ಸೈನಿಕರು ಹೋರಾಡಿ ದ್ದರಿಂದಲೇ ಗೆಲುವು ಸಾಧ್ಯವಾಯಿತು ಎಂದು ತಿಳಿಸಿದರು.

ಸೌತ್‌ಎಂಡ್‌ನಿಂದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ವರೆಗೂ ಹಮ್ಮಿಕೊಂಡಿದ್ದ ಜಾಥಾ ದಲ್ಲಿ ನೂರಾರು ನಾಗರಿಕರು ಪಾಲ್ಗೊಂಡಿದ್ದವು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್, ಹಾಸನದ ಹುತಾತ್ಮ ಯೋಧ ನಾಗೇಶ್ ಪತ್ನಿ ಆಶಾ ಹಾಗೂ ಪಾಲಿಕೆ ಸದಸ್ಯರು ಇದ್ದರು.