* ಆನ್'ಲೈನ್ ಫೇಮೆಂಟ್ ವ್ಯವಸ್ಥೆಗೆ ಫೇಸ್ಬುಕ್ ಹೆಜ್ಜೆ* ಫೇಸ್ಬುಕ್ ಮೂಲಕವೂ ಹಣ ಕಳುಹಿಸಿರಿ* ಪೇಪಾಲ್ ಜೊತೆ ಫೇಸ್ಬುಕ್ ಒಪ್ಪಂದ* ಜಗತ್ತಿನ ಅತ್ಯಂತ ಜನಪ್ರಿಯ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಫೇಸ್ಬುಕ್

ಬೆಂಗಳೂರು(ಅ. 21): ಭಾರತದಲ್ಲಿ ಕ್ಯಾಷ್'ಲೆಸ್ ಸಮಾಜ ನಿರ್ಮಾಣಕ್ಕೆ ಒತ್ತುಕೊಡಲಾಗುತ್ತಿರುವ ಈ ಸಂದರ್ಭದಲ್ಲಿ ಪೇಟಿಎಂ ಸೇರಿದಂತೆ ಸಾಕಷ್ಟು ಕಂಪನಿಗಳು ಆನ್'ಲೈನ್ ಪೇಮೆಂಟ್ ವ್ಯವಸ್ಥೆ ಮಾಡುತ್ತಿವೆ. ಎಲ್ಲಾ ಬ್ಯಾಂಕುಗಳು ಪ್ರತ್ಯೇಕ ಆನ್'ಲೈನ್ ಪೇಮೆಂಟ್ ವ್ಯವಸ್ಥೆ ಹೊಂದಿವೆ. ಜನರಿಗೆ ಈಗ ಹಣ ಕಳುಹಿಸಲು ಹಾಗೂ ಸ್ವೀಕರಿಸಲು ಸಾಕಷ್ಟು ಆಯ್ಕೆಗಳಿವೆ. ಜಗತ್ತಿನ ಅತೀ ಜನಪ್ರಿಯ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಫೇಸ್ಬುಕ್ ಕೂಡ ಆನ್'ಲೈನ್ ಪೇಮೆಂಟ್ ಸೇವೆಗೆ ಧುಮುಕಿದೆ. ಈ ವಿಚಾರದಲ್ಲಿ ಅಮೆರಿಕದ ಪ್ರಮುಖ ಪೇಮೆಂಟ್ ಸಂಸ್ಥೆ ಪೇಪಾಲ್ ಜೊತೆ ಫೇಸ್ಬುಕ್ ಒಪ್ಪಂದ ಮಾಡಿಕೊಂಡಿದೆ. ಫೇಸ್ಬುಕ್'ನ ಮೆಸೆಂಜರ್ ಮೂಲಕ ಹಣದ ವಹಿವಾಟು ನಡೆಸುವ ಅವಕಾಶ ನೀಡಲಾಗಿದೆ.

ಹಣ ಕಳುಹಿಸುವುದು ಹೇಗೆ?
ಜನರು ಫೇಸ್ಬುಕ್ ಮೆಸೆಂಜರ್ ಮತ್ತು ಪೇಪಾಲ್ ಅಕೌಂಟ್ ಎರಡನ್ನೂ ಹೊಂದಿರಬೇಕು. ಮೆಸೆಂಜರ್'ನಲ್ಲಿ ಮೆಸೇಜ್ ಟೈಪ್ ಮಾಡುವಾಗ ನೀಲಿ ಬಣ್ಣದ ಪ್ಲಸ್ ಚಿಹ್ನೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಕಾಣುವ ಹಸಿರು ಬಣ್ಣದ ಪೇಮೆಂಟ್ ಬಟನ್'ನ್ನು ಆಯ್ಕೆ ಮಾಡಿಕೊಂಡು ಫ್ರೆಂಡ್ಸ್'ಗೆ ಹಣ ಕಳುಹಿಸಬಹುದು; ಅಥವಾ ಹಣಕ್ಕಾಗಿ ಮನವಿ ಮಾಡಿಕೊಳ್ಳಬಹುದು.