ರಾಜಸ್ಥಾನ(ಸೆ.24): ಇತ್ತೀಚಿನ ದಿನಗಳಲ್ಲಿ ಸೆಲ್ಪಿ ಗೀಳಿನಿಂದ ಏನೆಲ್ಲಾ ಅವಾಂತರ ಆಗ್ತಿವೆ ಎಂಬುದು ನಿಮಗೆ ಗೊತ್ತಿದೆ. ಅದಕ್ಕೀಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಸೆಲ್ಫಿ ಗೀಳಿಗೆ ಒಳಗಾದ ಯುವಕನೋರ್ವನ ಮೇಲೆ ಹೆಬ್ಬಾವು ದಾಳಿ ಮಾಡಿದೆ.

ರಾಜಸ್ಥಾನದ ಸಿರೋಹಿ ಜಿಲ್ಲೆಯ ಹೋಟೆಲ್‌‌'ವೊಂದರಲ್ಲಿ ಹೆಬ್ಬಾವು ನುಸುಳಿರುವುದು ಗೊತ್ತಾಗಿದೆ. ತಕ್ಷಣ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದವರು ಅರಣ್ಯ ಇಲಾಖೆಗೆ ಫೋನ್‌ ಮಾಡಿ ಅದನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹೆಬ್ಬಾವಿಗೆ ಹಿಡಿದು ಅರಣ್ಯಕ್ಕೆ ಬಿಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಯುವಕನೋರ್ವ ಹೆಬ್ಬಾವಿನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆ ವೇಳೆ ಏಕಾಏಕಿಯಾಗಿ ಹಾವು ಆತನ ಮೇಲೆ ದಾಳಿ ಮಾಡಿದೆ. ಆ ವೇಳೆ ಯುವಕ ಹಾವಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.