ಜೇವರ್ಗಿ ತಾಲೂಕಿನ ಸುಂಬಡ ನಿವಾಸಿ ಸುಧಾಕರ(26) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಾತ. ಸೆಲ್ಪಿ ವಿಡಿಯೋದಲ್ಲಿ ಮಲ್ಲಪ್ಪ ಮುರುಳಿ, ಬಾಗವ್ವ ಮುರುಳಿ, ಭೀಮಾಬಾಯ್, ಮಾದೇವಿ ಎನ್ನುವವರೇ ತನ್ನ ಸಾವಿಗೆ ನೇರ ಕಾರಣ ಎಂದು ಹೇಳಿಕೊಂಡಿದ್ದಾನೆ. ಸಾವಿಗೆ ಜೈ ಕರ್ನಾಟಕ ರಕ್ಷಣಾ ವೇದಿಕೆಯವರು ನ್ಯಾಯ ಒದಗಿಸಬೇಕೆಂದು ಕೇಳಿಕೊಂಡಿದ್ದಾನೆ.
ಕಲಬುರಗಿ(ಡಿ.29): ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಯುವಕನೋರ್ವ ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಜೇವರ್ಗಿ ತಾಲೂಕಿನ ಸುಂಬಡ ನಿವಾಸಿ ಸುಧಾಕರ(26) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಾತ. ಸೆಲ್ಪಿ ವಿಡಿಯೋದಲ್ಲಿ ಮಲ್ಲಪ್ಪ ಮುರುಳಿ, ಬಾಗವ್ವ ಮುರುಳಿ, ಭೀಮಾಬಾಯ್, ಮಾದೇವಿ ಎನ್ನುವವರೇ ತನ್ನ ಸಾವಿಗೆ ನೇರ ಕಾರಣ ಎಂದು ಹೇಳಿಕೊಂಡಿದ್ದಾನೆ. ಸಾವಿಗೆ ಜೈ ಕರ್ನಾಟಕ ರಕ್ಷಣಾ ವೇದಿಕೆಯವರು ನ್ಯಾಯ ಒದಗಿಸಬೇಕೆಂದು ಕೇಳಿಕೊಂಡಿದ್ದಾನೆ. ಆ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಮೂರು ದಿನಗಳ ಹಿಂದೆ ಸುಧಾಕರ ಪತ್ನಿ ರೇಖಾ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅವರನ್ನು ಭೇಟಿಯಾಗಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೆಲ್ಫಿಯಲ್ಲಿ ಹೇಳಿರುವ ನಾಲ್ವರು ಹೆಂಡತಿ ಸಂಬಂಧಿಗಳು ಎಂದು ಹೇಳಲಾಗಿದ್ದು, ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
