ಉತ್ಖನನದ ವೇಳೆ ಪುರಾತನ ವಸ್ತುಗಳನ್ನು ಪ್ರಾಚ್ಯ ವಸ್ತು ಇಲಾಖೆ ಸಿಬ್ಬಂದಿ ರಕ್ಷಿಸಿ, ಸಂಗ್ರಹಾಲಯದಲ್ಲಿಟ್ಟಿರುತ್ತಾರೆ. ಅಂತಹ ಸ್ಥಳಗಳಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ಫೋಟೋ ತೆಗೆದು ಕೊಳ್ಳುವವರಿಂದ ಆಗಬಹುದಾದ ಅವಾಂತರ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ(ಜು.18): ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಾದ ಹಂಪಿ, ಬಿಜಾಪುರ, ಬಾದಾಮಿ, ಐಹೊಳೆ, ಶ್ರೀರಂಗಪಟ್ಟಣ ಹಾಗೂ ಹಳೇಬೀಡು ಸೇರಿದಂತೆ ದೇಶದ 46 ಪ್ರಾಚ್ಯವಸ್ತು ಸಂಗ್ರಹಾಲಯ (ಮ್ಯೂಸಿಯಂ)ಗಳಲ್ಲಿ ಸೆಲ್ಫಿ ಸ್ಟಿಕ್‌ಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿಷೇಧ ವಿಧಿಸಿದೆ.

ಉತ್ಖನನದ ವೇಳೆ ಪುರಾತನ ವಸ್ತುಗಳನ್ನು ಪ್ರಾಚ್ಯ ವಸ್ತು ಇಲಾಖೆ ಸಿಬ್ಬಂದಿ ರಕ್ಷಿಸಿ, ಸಂಗ್ರಹಾಲಯದಲ್ಲಿಟ್ಟಿರುತ್ತಾರೆ. ಅಂತಹ ಸ್ಥಳಗಳಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ಫೋಟೋ ತೆಗೆದು ಕೊಳ್ಳುವವರಿಂದ ಆಗಬಹುದಾದ ಅವಾಂತರ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಪಾರಂಪರಿಕ ತಾಣಗಳಲ್ಲಿ ಪ್ರವಾಸಿಗರು ಹಲವು ಲೆನ್ಸ್, ಟ್ರೈಪೋಡ್, ಮಾನೋಪೋಡ್ ಹಾಗೂ ಫ್ಲಾಷ್‌ಲೈಟ್‌ಗಳನ್ನು ಉಪಯೋಗಿಸಿ ಫೋಟೋ ತೆಗೆಯಬೇಕು ಎಂದಾದರೆ ೧೫ ದಿನ ಮುಂಚಿತವಾಗಿಯೇ ಶುಲ್ಕ ಪಾವತಿಸಿ ಅನುಮತಿ ಪಡೆದುಕೊಳ್ಳಬೇಕು. ಪ್ರಾಚ್ಯವಸ್ತು ಸಂಗ್ರಹಾಲಯಗಳಲ್ಲಿ ಮೊಬೈಲ್ ಮೂಲಕ ವೈಯಕ್ತಿಕ ಬಳಕೆಗೆ ಫೋಟೋ ತೆಗೆಯಲು ಯಾವುದೇ ಅಡ್ಡಿ ಇಲ್ಲ. ಶುಲ್ಕವನ್ನೂ ಕೊಡಬೇಕಿಲ್ಲ. ಆದರೆ ಫೋಟೋಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದಾದರೆ ಪ್ರತಿ ಛಾಯಾಚಿತ್ರಕ್ಕೂ 750 ರು. ಪಾವತಿಸಬೇಕಾಗುತ್ತದೆ ಎಂದು ಹೊಸ ನಿಯಮ ಹೇಳುತ್ತದೆ.

epaperkannadaprabha.com