ಲಕ್ನೋ(ಅ.13): ಇತ್ತೀಚಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಸೆಲ್ಫಿ ಹುಚ್ಚು ಏನೆಲ್ಲಾ ಅವಾಂತರ ಸೃಷ್ಠಿ ಮಾಡ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಅದರ ಕ್ರೇಜ್‌ಗೆ ಸಿಲುಕಿ ಯುವತಿಯೊಬ್ಬಳು ತನ್ನ ತಲೆಗೂದಲನ್ನೇ ಕಳೆದುಕೊಂಡಿದ್ದಾಳೆ.

ಲಕ್ನೋದ ಭಾಗ್ವತ್ ಜಿಲ್ಲೆ ಬರೌತ್ ಪಟ್ಟಣದಲ್ಲಿ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಜೈಂಟ್ ವ್ಹೀಲ್ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಶಾಲಾ ವಿದ್ಯಾರ್ಥಿನಿಯೊಬ್ಬಳ ಕೂದಲು ವ್ಹೀಲ್‌ಗೆ ಸಿಕ್ಕಿಹಾಕಿಕೊಂಡು ಸಂಪೂರ್ಣ ಕೇಶರಾಶಿ ಕಿತ್ತುಹೋಗಿದೆ. ತಕ್ಷಣ ಆಕೆಯ ಗೆಳತಿ ಕಿರುಚಾಡಲು ಆರಂಭಿಸಿದಾಗ ವ್ಹೀಲ್ ನಿಲ್ಲಿಸಿ ಆಕೆಯ ಕೂದಲು ಬಿಡಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.