Asianet Suvarna News Asianet Suvarna News

ಶಾರ್ಕ್ ದಾಳಿಗೆ ಬಲಿ ಆದವರಿಗಿಂತ ಸೆಲ್ಫಿ ತೆಗೆಯವಾಗಲೇ ಹೆಚ್ಚು ಸಾವು

ವಿಶ್ವದಲ್ಲಿ ಶಾರ್ಕ್ ದಾಳಿಗೆ ಒಳಗಾಗಿ ಸಾಯುವವರಿಗಿಂತ ಸೆಲ್ಫಿ ಗೀಳಿಗೆ ಬಿದ್ದು ಸಾಯುವವರ ಸಂಖ್ಯೆಯೇ ಅತೀ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವರದಿಯೊಂದು ಹೇಳಿದೆ. 

Selfi Death More than Shark Attack
Author
Bengaluru, First Published Jul 1, 2019, 10:41 AM IST

ಬೆಂಗಳೂರು [ಜು.1] :  ಕೆಲವರು ಸೆಲ್ಫಿ ಹುಚ್ಚಿಗೆ ತಮ್ಮ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಾರೆ. ಎಲ್ಲೋ ಅಪರೂಪಕ್ಕೊಮ್ಮೆ ಇಂಥ ಘಟನೆ ನಡೆಯುತ್ತದೆ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. 

ಕಳೆದ ಒಂದು ದಶಕದಲ್ಲಿ ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಂಡವರ ಸಂಖ್ಯೆ ಶಾರ್ಕ್ ದಾಳಿಗೆ ಬಲಿಯಾದವರ ಸಂಖ್ಯೆಯ ಐದು ಪಟ್ಟು ಹೆಚ್ಚಿದೆಯಂತೆ. 2011ರ ಅಕ್ಟೋಬರ್‌ನಿಂದ 2017ರ ಡಿಸೆಂಬರ್‌ ವರೆಗೆ ವಿಶ್ವದಾದ್ಯಂತ 259 ಜನರು ಸೆಲ್ಫಿಗಾಗಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ 159 ಜನ ಸಾವನ್ನಪ್ಪಿದ್ದಾರೆ.

ಇದೇ ಅವಧಿಯಲ್ಲಿ ಶಾರ್ಕ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಕೇವಲ 50 ಎಂದು ಇಂಡಿಯಾಸ್‌ ಜರ್ನಲ್‌ ಆಫ್‌ ಫ್ಯಾಮಿಲಿ ಮೆಡಿಸಿನ್‌ ಆ್ಯಂಡ್‌ ಪ್ರೈಮರಿ ಕೇರ್‌ಯ ಅಧ್ಯಯನ ವರದಿ ತಿಳಿಸಿದೆ.

Follow Us:
Download App:
  • android
  • ios