ಬಹುಜನ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಉದ್ಯಮಿ ದೀಪಕ್ ಬಾರದ್ವಾಜ್’ರವರ ಹತ್ಯೆಯಲ್ಲಿ ಭಾಗಿಯಾಗಿರುವ ಸ್ವಯಂಘೋಷಿತ ದೇವಮಾನವ ಬಾಬಾ ಪ್ರತಿಭಾನಂದರವರನ್ನು ಗಾಜಿಯಾಬಾದ್ ಪೊಲೀಸರು ಇಂದು ಬಂಧಿಸಿದ್ದಾರೆ.
ನವದೆಹಲಿ (ಸೆ.16): ಬಹುಜನ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಉದ್ಯಮಿ ದೀಪಕ್ ಬಾರದ್ವಾಜ್’ರವರ ಹತ್ಯೆಯಲ್ಲಿ ಭಾಗಿಯಾಗಿರುವ ಸ್ವಯಂಘೋಷಿತ ದೇವಮಾನವ ಬಾಬಾ ಪ್ರತಿಭಾನಂದರವರನ್ನು ಗಾಜಿಯಾಬಾದ್ ಪೊಲೀಸರು ಇಂದು ಬಂಧಿಸಿದ್ದಾರೆ.
2009 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ದೀಪಕ್ ಭಾರದ್ವಾಜ್ ಶ್ರೀಮಂತ ಸ್ಪರ್ಧಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ಆಸ್ತಿಯ ಮೌಲ್ಯ ಸುಮಾರು 600 ಕೋಟಿ. ಇವರ ಹತ್ಯೆಗೆ ಬಾಬಾ ಪ್ರತಿಭಾನಂದ ಸಂಚು ರೂಪಿಸಿ ಹಂತಕರಿಗೆ ಸುಪಾರಿ ಕೊಟ್ಟಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ದೀಪಕ್ ಭಾರದ್ವಾಜ್ ಹತ್ಯೆಯ ನಂತರ ಬಾಬಾ ಪ್ರತಿಬಾನಂದ ತಲೆಮರೆಸಿಕೊಂಡಿದ್ದರು. ಗಾಜಿಯಬಾದ್ ರೈಲ್ವೇ ಸ್ಟೇಷನ್ ಬಳಿ ಬಾಬಾ ಅಡ್ಡಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ನಾವು ಕೆಲವು ತಂಡಗಳನ್ನು ಮಾಡಿ ಅವರನ್ನು ಬಂದಿಸಿದೆವು. ಅವರಿಂದ ಪಿಸ್ತೂಲನ್ನು ವಶಪಡಿಸಿಕೊಂಡಿದ್ದೇವೆ ಎಂದು ಎಸ್ಪಿ ಅಶೋಕ್ ತೋಮರ್ ಹೇಳಿದ್ದಾರೆ.
