ಜೆಎನ್‌ಯುದಲ್ಲಿ ಎಸ್‌ಎಫ್‌ಐ ಸಂಘಟನೆ ಯಿಂದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿದ್ದ ನಾಸಿರ್ ನಂತರ ಕಾಂಗ್ರೆಸ್‌ಗೆ ಬಂದವರು

ಕಾಂಗ್ರೆಸ್‌ನ ಘಟಾನುಘಟಿ ಮುಸ್ಲಿಂ ನಾಯಕರಾದ ರೋಷನ್ ಬೇಗ್, ಸಲೀಂ ಅಹ್ಮದ್ ಮತ್ತು ಹಿಂಡಸಗೇರಿ ದಿಲ್ಲಿಗೆ ಬಂದು ಪಟ್ಟಾಗಿ ಕುಳಿತರೂ ಕೊನೆಗೆ ಮುಸ್ಲಿಂ ಕೋಟಾದಲ್ಲಿ ಟಿಕೆಟ್ ಸಿಕ್ಕಿದ್ದು ಎಡ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದಿರುವ ಯುವಕ ನಾಸಿರ್ ಹುಸೇನ್ ಬಳ್ಳಾರಿಗೆ. ಜೆಎನ್‌ಯುದಲ್ಲಿ ಎಸ್‌ಎಫ್‌ಐ ಸಂಘಟನೆ ಯಿಂದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿದ್ದ ನಾಸಿರ್ ನಂತರ ಕಾಂಗ್ರೆಸ್‌ಗೆ ಬಂದವರು. ಕಳೆದ ಎರಡು ವರ್ಷಗಳಿಂದ ದಿಲ್ಲಿಯಿಂದ ಬಳ್ಳಾರಿಗೆ ಶಿಫ್ಟ್ ಆಗಿ ಶಾಸಕನಾಗಲು ಟಿಕೆಟ್ ಕೇಳುತ್ತಿದ್ದ ನಾಸಿರ್‌ಗೆ ರಾಜ್ಯಸಭೆಗೆ ಹೋಗುವ ಅವಕಾಶ ಸಿಕ್ಕಿದೆ.