ರತ್ನಪ್ರಭಾ ಮೇಡಂ ದಂಡಯಾತ್ರೆ

Selected Part of Prashanth natu column july 03 - Part 4
Highlights

  • ಸಿಎಂ ಹೆಚ್ಡಿಕೆ ಸಹಿ ಮಾಡಿದ್ದರೂ ದೇವೇಗೌಡರು ಒಪ್ಪಿರಲಿಲ್ಲ
  • ದೆಹಲಿಯ ಲಾಬಿಯೂ ಪ್ರಯೋಜನವಾಗಲಿಲ್ಲ

ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ಬಂದಾಗ ಕರ್ನಾಟಕ ಭವನಕ್ಕೆ ಬಂದು ಕುಳಿತಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಮತ್ತೆ 3 ತಿಂಗಳು ತಮ್ಮನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಸುವಂತೆ ಪರಿಪರಿಯಾಗಿ ಕೇಳಿಕೊಂಡರಂತೆ.

ಕೊನೆಗೆ ಅಂತೂ ಮನಸ್ಸು ಬದಲಿಸಿದ ಕುಮಾರಸ್ವಾಮಿ ವಿಮಾನ ಹತ್ತುವಾಗ ಕಡತಕ್ಕೆ ಸಹಿ ಮಾಡಿದರಂತೆ. ಆದರೆ, ಅತ್ತ ದೇವೇಗೌಡರು ಇದಕ್ಕೆ ಒಪ್ಪಲಿಲ್ಲ. ನಂತರ ಆಂಧ್ರದವರಾದ ರಾಮ್ ಮಾಧವ್‌ರನ್ನು ಸಂಪರ್ಕಿಸಿದ ರತ್ನಪ್ರಭಾ, ಪ್ರಧಾನಿ ಕಾರ್ಯಾಲಯದಲ್ಲೂ ಲಾಬಿ ನಡೆಸಿದರಂತೆ. ಆದರೆ ಯಾವುದೂ ಸಹಾಯಕ್ಕೆ ಬರಲಿಲ್ಲ.

[ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ]

loader