ದೆಹಲಿಯಲ್ಲಿ ಸಿದ್ದು ಕನ್ನಡ ಪ್ರೇಮ: ಆಂಗ್ಲ ಪತ್ರಕರ್ತರಿಗೆ ನೋ ಇಂಗ್ಲಿಷ್ ಎಂದರು ಸಿಎಂ

First Published 13, Mar 2018, 8:59 PM IST
Selected Part of Prashanth Naatu India gate Column Part 3
Highlights

ಆದರೆ ಸಂಜೆ ದಿಲ್ಲಿಯ ಆಂಗ್ಲ ಭಾಷೆಯ ಪತ್ರಕರ್ತರು ಮುತ್ತಿಕೊಂಡ ನಂತರ ಚಾನಲ್‌ಗೆ, ವೆಬ್‌ಸೈಟ್‌ಗೆ ಎಂದೆಲ್ಲ ಪ್ರತ್ಯೇಕ ಇಂಟರ್‌ವ್ಯೂ ಕೊಡುತ್ತಿದ್ದರು.

ದೆಹಲಿಗೆ ಬಂದಿದ್ದ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ಆಂಗ್ಲ ಚಾನಲ್‌ಗಳು ಎಷ್ಟೇ ಪ್ರಶ್ನೆ ಕೇಳಿ ಇಂಗ್ಲಿಷ್‌ನಲ್ಲೇ ಉತ್ತರ ಕೊಡಿ ಎಂದರೂ ‘ನೋ ನೋ ಇಂಗ್ಲಿಷ್. ಓನ್ಲಿ ಕನ್ನಡ’ ಎಂದು ಜೋರಾಗಿ ಹೇಳುತ್ತಿದ್ದರು. ಪತ್ರಿಕಾಗೋಷ್ಠಿ ಮುಗಿದ ನಂತರ ಆಂಗ್ಲ ಚಾನಲ್‌ನ ಪ್ರಸಿದ್ಧ ಪತ್ರಕರ್ತರು ಬಂದರೂ ಕ್ಯಾರೇ ಅನ್ನದ ಸಿದ್ದರಾಮಯ್ಯ, ‘ಐ ನೋ ಇಂಗ್ಲಿಷ್, ಬಟ್ ಆ್ಯಮ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ’ ಎಂದು ಹೇಳಿ ಸಾಗ ಹಾಕುತ್ತಿದ್ದರು.

ಆದರೆ ಇನ್ನೊಂದು ಕಡೆ ಡಿ ಕೆ ಶಿವಕುಮಾರ್ ಕನ್ನಡ ಪತ್ರಕರ್ತರು ಕೇಳಿದರೆ ‘ಇಲ್ಲಪ್ಪಾ, ಸಿಎಂ ಮಾತಾಡ್ತಾರೆ, ನಾನಲ್ಲ’ ಎಂದು ಜಾರಿಕೊಳ್ಳುತ್ತಿದ್ದರು. ಆದರೆ ಸಂಜೆ ದಿಲ್ಲಿಯ ಆಂಗ್ಲ ಭಾಷೆಯ ಪತ್ರಕರ್ತರು ಮುತ್ತಿಕೊಂಡ ನಂತರ ಚಾನಲ್‌ಗೆ, ವೆಬ್‌ಸೈಟ್‌ಗೆ ಎಂದೆಲ್ಲ ಪ್ರತ್ಯೇಕ ಇಂಟರ್‌ವ್ಯೂ ಕೊಡುತ್ತಿದ್ದರು. ಯಾಕೆ ಹೀಗೆ ಎಂದು ಕೇಳಿದರೆ ಬೆಂಗಳೂರಿನಲ್ಲಿ ನಿಮ್ಮ ಜೊತೇನೆ ತಾನೇ ಮಾತನಾಡೋದು’ ಎಂದು ಮತ್ತೆ ಜಾರಿಕೊಂಡರು. ಅಂದ ಹಾಗೆ ಶಿವಕುಮಾರ್ ಲಿಫ್ಟ್ ಉಪಯೋಗಿಸೋದು ಕಡಿಮೆ. ತೂಕ ಇಳಿಸೋಕೆ ಮೆಟ್ಟಿಲು ಹತ್ತಿ ಇಳಿಯಿರಿ ಎಂದು ಡಯಟೀಷಿಯನ್ ಸಲಹೆ ನೀಡಿದ್ದಾರಂತೆ.

-ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ

loader