ಚಿಕ್ಕೋಡಿಯ ಆರೆಸ್ಸೆಸ್ ದಾಖಲೆ

Selected Part of Prashant Natu India Gate Column july 10 Part 5
Highlights

  • ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಕೆಲಸ ಆರಂಭವಾಗಿದ್ದು 1935ರಲ್ಲಿ
  • ಹೆಡಗೆವಾರ್ ಉದ್ಘಾಟಿಸಿದ ಚಿಕ್ಕೋಡಿಯ ಶೀಲ್ ಬಲಸಂವರ್ಧನ್ ವ್ಯಾಯಾಮ ಶಾಲೆ ಇನ್ನೂ ಇದೆಯಂತೆ

ಇತ್ತೀಚೆಗೆ ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಕರ್ನಾಟಕದ ಚುನಾವಣೆಯ ಪರಾಮರ್ಶೆ ನಡೆಯುತ್ತಿದ್ದಾಗ ಆರ್‌ಎಸ್‌ಎಸ್ ಹಿರಿಯ ಪ್ರಚಾರಕರೊಬ್ಬರು ೮೩ ವರ್ಷ ಹಳೆಯ ಕಥೆ ನೆನಪು ಮಾಡಿಕೊಟ್ಟರಂತೆ. 

ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಕೆಲಸ ಆರಂಭವಾಗಿದ್ದು 1935ರಲ್ಲಿ ಚಿಕ್ಕೋಡಿಯಲ್ಲಿ. 1937ರಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಡಾಕ್ಟರ್ ಹೆಡಗೆವಾರ್ ಸಂಘದ ಕೆಲಸ ನೋಡಲು ಚಿಕ್ಕೋಡಿಗೆ ಬರುತ್ತೇನೆ ಎಂದು ಪತ್ರ ಬರೆದು ತಿಳಿಸಿದಾಗ, ವಸತಿ ಊಟದ ವ್ಯವಸ್ಥೆ ಹೇಗೆ ಮಾಡುವುದು ಎಂದು ಹೆದರಿದ ಹುಡುಗರು ನೀವು ಮುಂದಿನ ವರ್ಷ ಬನ್ನಿ ಎಂದು ಪತ್ರ ಬರೆದರಂತೆ.

ಆದರೆ ಇದಕ್ಕೆ ಒಪ್ಪದ ಡಾಕ್ಟರ್ ಸಾಹೇಬರು ತನ್ನ ವಸತಿ ವ್ಯವಸ್ಥೆ ತಾನೇ ಪಕ್ಕದ ಸದಲಗಾದಲ್ಲಿ ಮಾಡಿಕೊಂಡು ತನ್ನ ಬುತ್ತಿ ತಾನೇ ಕಟ್ಟಿಕೊಂಡು ಬಂದರಂತೆ. ಆಗ ಹೆಡಗೆವಾರ್ ಉದ್ಘಾಟಿಸಿದ ಚಿಕ್ಕೋಡಿಯ ಶೀಲ್ ಬಲಸಂವರ್ಧನ್ ವ್ಯಾಯಾಮ ಶಾಲೆ ಇನ್ನೂ ಇದೆಯಂತೆ. ಅಂದಹಾಗೆ 83 ವರ್ಷದ ನಂತರವೂ ಚಿಕ್ಕೋಡಿ ವಿಧಾನಸಭೆ ಗೆಲ್ಲುವುದು ಬಿಜೆಪಿ ಮತ್ತು ಆರ್ ಎಸ್‌ಎಸ್‌ಗೆ ಸಾಧ್ಯವಾಗುತ್ತಿಲ್ಲ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]  

loader