Asianet Suvarna News Asianet Suvarna News

2019ರಲ್ಲಿ ಗೆದ್ದರೆ ಜಗಜೀವನ್ ರಾಮ್ ದಾಖಲೆ ಸರಿಗಟ್ಟುವ ರಾಜ್ಯ ನಾಯಕ

  • 1972ರಿಂದ ಯಾವುದೇ ಚುನಾವಣೆ ಸೋಲದ ನಾಯಕ ಎಂಬ ಹಿರಿಮೆ ಖರ್ಗೆ ಅವರಿಗಿದೆ
  • 2019ರಲ್ಲಿ ಗೆದ್ದರೆ 7 ಬಾರಿ ಗೆದ್ದು ಬಾಬು ಜಗಜೀವನ್ ರಾಮ್ ದಾಖಲೆ ಸರಿಗಟ್ಟುತ್ತಾರೆ ಮುನಿಯಪ್ಪ
Selected Part of Prashant Natu India Gate Column july 10 Part 4

ಕಾಂಗ್ರೆಸ್‌ನಲ್ಲಷ್ಟೇ ಏಕೆ, ದೇಶದ ದಲಿತ ಸಮುದಾಯದಲ್ಲಿ ಖರ್ಗೆ ಮತ್ತು ಮುನಿಯಪ್ಪ ಜ್ಯೇಷ್ಠ ನಾಯಕರು. 1972ರಿಂದ ಯಾವುದೇ ಚುನಾವಣೆ ಸೋಲದ ದಲಿತ ನಾಯಕ ಎಂಬ ಹಿರಿಮೆ ಖರ್ಗೆ ಅವರಿಗಿದ್ದರೆ, 91ರಿಂದ ಸತತವಾಗಿ ಗೆದ್ದಿರುವ ಮುನಿಯಪ್ಪ 2019ರಲ್ಲಿ ಗೆದ್ದರೆ 7 ಬಾರಿ ಗೆದ್ದು ಬಾಬು ಜಗಜೀವನ್ ರಾಮ್ ದಾಖಲೆ ಸರಿಗಟ್ಟುತ್ತಾರೆ. ಆದರೆ ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಅಷ್ಟಕ್ಕಷ್ಟೆ.

ಇದಕ್ಕೆ ಮುಖ್ಯ ಕಾರಣ ಖರ್ಗೆ ದಲಿತ ಬಲಗೈ ಆದರೆ, ಮುನಿಯಪ್ಪ ದಲಿತ ಎಡಗೈ ಸಮುದಾಯ. ‘ಖರ್ಗೆ ಬರೀ ಬಲಗೈಗೆ ಪ್ರಾತಿನಿಧ್ಯ ಕೊಡುತ್ತಾರೆ, ನಮ್ಮನ್ನು ತುಳಿಯುತ್ತಾರೆ’ ಎಂದು ಮುನಿಯಪ್ಪ ಅವರು ಸೋನಿಯಾ ಆದಿಯಾಗಿ ವೇಣುಗೋಪಾಲ್‌ವರೆಗೆ ಅಳಲು ತೋಡಿಕೊಳ್ಳುತ್ತಾರೆ. ‘ಮುನಿಯ ಪ್ಪ ಬರೀ ಮಾತೆತ್ತಿದ್ದರೆ ಎಡಗೈ ಪೋಲಿಟಿಕ್ಸ್ ಮಾಡುತ್ತಾರೆ’ ಎಂದು ಖರ್ಗೆ ದೂರುತ್ತಾರೆ. ದಲಿತ ಸಮುದಾಯ ಮತ್ತು ದಲಿತ ನಾಯಕರು ತಮ್ಮ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಪ್ರಬುದ್ಧ ಮೆರೆದರೆ ಕರ್ನಾಟಕ ದಲಿತ ಮುಖ್ಯಮಂತ್ರಿ ಕಾಣಲು ಇಷ್ಟೊಂದು ಕಾಯಬೇಕಾಗುತ್ತಿರಲಿಲ್ಲ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]  

Follow Us:
Download App:
  • android
  • ios