2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶವನ್ನು ಮಲ್ಲಿಕಾರ್ಜುನ್  ಖರ್ಗೆ ಮತ್ತೊಮ್ಮೆ ತಪ್ಪಿಸಿಕೊಂಡರು.

ಆದರೆ, 2019ರಲ್ಲಿ ಲೋಕಸಭಾ ಚುನಾವಣೆ ನಂತರ ಪ್ರಧಾನಿಯಾಗಲು ಒಂದು ಕೊನೇ ಅವಕಾಶ ಸಿಕ್ಕರೂ ಸಿಗಬಹುದು, ಅದೂ ಅದೃಷ್ಟ ಇದ್ದರೆ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಕಚೇರಿಯಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಒಂದು ವೇಳೆ ಅತಂತ್ರ ಲೋಕಸಭೆ ಸೃಷ್ಟಿಯಾದರೆ ತೃತೀಯ ರಂಗದ ನಾಯಕರನ್ನು ಸೆಳೆಯಲು ರಾಹುಲ್ ಗಾಂಧಿ ದಲಿತ್ ಕಾರ್ಡ್ ಆಡಬಹುದು.

ಆಗ ಕಾಂಗ್ರೆಸ್ ಬಳಿ ಇರುವ ಏಕೈಕ ಹೆಸರೆಂದರೆ ಮಲ್ಲಿಕಾರ್ಜುನ್ ಖರ್ಗೆ. ಇವರ ಹೆಸರು ಮುಂದೆ ತಂದರೆ ಮಾಯಾವತಿಗೆ ವಿರೋಧ ಮಾಡಲಿಕ್ಕೆ ಕಾರಣವೇ ಇರುವುದಿಲ್ಲ. ಆದರೆ ಇದೆಲ್ಲ ಈಗ ದಿಲ್ಲಿಯ ಪೊಲಿಟಿಕಲ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಚರ್ಚೆ ಮಾತ್ರ. ಹೀಗೆಲ್ಲ ನಡೆಯಬೇಕಾದರೆ ದೇವೇಗೌಡರ ತರಹ ನಿಜಕ್ಕೂ ಅದೃಷ್ಟ ಗಟ್ಟಿಯಿರಬೇಕು ಬಿಡಿ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]