ಎಂಬಿ ಪಾಟೀಲರ ಭರ್ಜರಿ ಮೇಕಪ್ ! ಮುಂದೊಮ್ಮೆ ಮುಖ್ಯಮಂತ್ರಿಯೂ ಆಗಬಹುದು ಎಂದರು !

First Published 13, Mar 2018, 9:16 PM IST
Selected Part of India Gate column Part 4
Highlights

ದೆಹಲಿಗೆ ಬಂದಾಗ ಬರೋಬ್ಬರಿ ೪ ಗಂಟೆ ಕನ್ನಡದ ಪತ್ರಕರ್ತರೊಡನೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿದ ಪಾಟೀಲರು ನಾನು ಜೀವನದಲ್ಲಿ ಕವಲು ದಾರಿಯಲ್ಲಿ ನಿಂತಿದ್ದೇನೆ, ಮುಂದೊಮ್ಮೆ ಮುಖ್ಯಮಂತ್ರಿಯೂ ಆಗಬಹುದು ಎಂದು ಹೇಳುತ್ತಾ ಜೋರಾಗಿ ನಗುತ್ತಿದ್ದರು

ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೋದಲ್ಲಿ ಬಂದಲ್ಲೆಲ್ಲ ಜನರು ‘ಪಾಟೀಲ್ರ.. ನಿಮ್ಮ ಜಾಹೀರಾತು ಟೀವಿ ಒಳಗ ನೋಡ್ತೇವ್ರಿ, ಆದ್ರ ಸ್ವಲ್ಪ ಮೇಕಪ್ ಜಾಸ್ತಿ ಹಚ್ಚಿದ್ರಿ ನೋಡ್ರಿ’ ಎಂದು ಹೇಳುತ್ತಾರಂತೆ. ಜಾಹೀರಾತು ಶೂಟ್ ಮಾಡುವಾಗ ಪಾಟೀಲರು ‘ಅಯ್ಯೋ ನನಗೆ ಮೇಕಪ್ ಬೇಡ, ಹಾಗೇ ಇರಲಿ’ ಎಂದು ಕೇಳಿದರೂ ಬಿಡದ ಪ್ರೊಡಕ್ಷನ್ ಹೌಸ್‌ನವರು ‘ಸ್ವಲ್ಪ ಫೌಂಡೇಶನ್ ಹಚ್ಚಿದರೆ ಚೆನ್ನಾಗಿ ಕಾಣುತ್ತೆ’ ಎಂದು ಹೇಳಿ ಮೇಕಪ್ ಹಚ್ಚಿದರಂತೆ. ದೆಹಲಿಗೆ ಬಂದಾಗ ಬರೋಬ್ಬರಿ ೪ ಗಂಟೆ ಕನ್ನಡದ ಪತ್ರಕರ್ತರೊಡನೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿದ ಪಾಟೀಲರು ನಾನು ಜೀವನದಲ್ಲಿ ಕವಲು ದಾರಿಯಲ್ಲಿ ನಿಂತಿದ್ದೇನೆ, ಮುಂದೊಮ್ಮೆ ಮುಖ್ಯಮಂತ್ರಿಯೂ ಆಗಬಹುದು ಎಂದು ಹೇಳುತ್ತಾ ಜೋರಾಗಿ ನಗುತ್ತಿದ್ದರು. ಮಾತು ಮುಗಿಸಿ ಎದ್ದಾಗ ‘ಲಿಂಗಾಯತ ಧರ್ಮ ಉತ್ತರ ಕರ್ನಾಟಕದಲ್ಲಿ ಮೋದಿ ಹವಾ ಠುಸ್ ಮಾಡ್ತದ ನೋಡ್ರಿ’ ಎಂದ ಪಾಟೀಲರು ನಂತರ ‘ಆದ್ರ ನಾವು ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡೇವಂತ ತಿಳ್ಕೊಳುದು ಬ್ಯಾಡ್ರಿ ಮತ್ತ..’ ಎನ್ನುತ್ತಿದ್ದರು.

-ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ

loader