Asianet Suvarna News Asianet Suvarna News

ಬಿಜೆಪಿಯ ಈ ನಾಯಕನ ವಿರುದ್ಧ ಸ್ಪರ್ಧಿಸಲು ಮಹಾದೇವಪ್ಪಗೆ ಮನಸ್ಸಿಲ್ಲವಂತೆ

. ಮೊದಲಿಗೆ ಸ್ವಲ್ಪ ಸೇಫ್ ಆಗಿರುವ ಸಿವಿ ರಾಮನ್‌ನಗರದ ಮೇಲೆ ಕಣ್ಣು ಹಾಕಿದರು. ಅಲ್ಲಿನ ಇನ್ನೊಬ್ಬ ಸ್ಥಳೀಯ ಆಕಾಂಕ್ಷಿ ರಮೇಶ್ ದಿಲ್ಲಿಯವರೆಗೆ ಬಂದು ವೇಣುಗೋಪಾಲ್‌ಗೆ ದೂರು ಕೊಟ್ಟು ಹೋಗಿದ್ದಾರೆ.

Selected part of India gate column
  • Facebook
  • Twitter
  • Whatsapp

‘ಮಹಾ’ದೇವಪುರ ತನ್ನ ಕ್ಷೇತ್ರಕ್ಕೆ ಮಗನನ್ನು ನಿಲ್ಲಿಸಬೇಕೆಂದಿರುವ ಸಿದ್ದರಾಮಯ್ಯ ಅವರ ಪರಮಾಪ್ತ ಎಚ್‌ಸಿ ಮಹದೇವಪ್ಪ ಬೆಂಗಳೂರಿನಲ್ಲಿ ಕ್ಷೇತ್ರ ಹುಡುಕುತ್ತಿದ್ದಾರೆ. ಮೊದಲಿಗೆ ಸ್ವಲ್ಪ ಸೇಫ್ ಆಗಿರುವ ಸಿವಿ ರಾಮನ್‌ನಗರದ ಮೇಲೆ ಕಣ್ಣು ಹಾಕಿದರು. ಅಲ್ಲಿನ ಇನ್ನೊಬ್ಬ ಸ್ಥಳೀಯ ಆಕಾಂಕ್ಷಿ ರಮೇಶ್ ದಿಲ್ಲಿಯವರೆಗೆ ಬಂದು ವೇಣುಗೋಪಾಲ್‌ಗೆ ದೂರು ಕೊಟ್ಟು ಹೋಗಿದ್ದಾರೆ. ಹೀಗಾಗಿ ಈಗ ಮಹದೇವಪ್ಪರಿಗೆ ವೇಣುಗೋಪಾಲ್ ಮಹದೇವಪುರ ಕ್ಷೇತ್ರದ ಬಗ್ಗೆ ಯೋಚಿಸುವಂತೆ ಹೇಳಿದ್ದು. ಆದರೆ ಅರವಿಂದ ಲಿಂಬಾವಳಿ ವಿರುದ್ಧ ಸ್ಪರ್ಧಿಸಲು ಮಹದೇವಪ್ಪಗೆ ಮನಸ್ಸಿಲ್ಲವಂತೆ. ಇಂಟ್ರೆಸ್ಟಿಂಗ್ ಎಂದರೆ ಮಹದೇವಪ್ಪ ಅವರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ತರದಂತೆ ಡಿ ಕೆ ಶಿ,ಪರಮೇಶ್ವರ್, ವೇಣುಗೋಪಾಲ್‌ಗೆ ಹೇಳಿಯೇಬಿಟ್ಟಿದ್ದಾರೆ. ಇಷ್ಟೆಲ್ಲಾ ಹೇಳುವುದರ ಉದ್ದೇಶ ಕಾಂಗ್ರೆಸ್‌ನಲ್ಲಿ ಟಿಕೆಟ್ ಪೊಲಿಟಿಕ್ಸ್ ಜೋರಾಗಿಯೇ ಶುರುವುದಕ್ಕಾಗಿ.

(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದಭಾಗ )

Follow Us:
Download App:
  • android
  • ios