ಎಸ್.ಎಂ. ರಾಜ್ಯಸಭಾ ಸದಸ್ಯರಾಗಿದ್ದು ಗೌಡರಿಂದ ?

ಡಿ.ಕೆ. ಶಿವಕುಮಾರ್ ಸುಮಾರು 10 ವರ್ಷಗಳ ಹಿಂದೆ ದೆಹಲಿಯಲ್ಲಿ ಮನೆ ತೆಗೆದುಕೊಳ್ಳಬೇಕೆಂದು ತೀರ್ಮಾನ ಮಾಡಿದಾಗ ತನ್ನನ್ನು ರಾಜಗುರು ಎಂದು ಕರೆದುಕೊಳ್ಳುವ ದ್ವಾರಕಾನಾಥ್ ಅವರನ್ನು ಕರೆದುಕೊಂಡು ಬಂದು ವಾಸ್ತು ನೋಡಿದ ಮೇಲೆಯೇ ಮನೆ ಫೈನಲ್ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ವಾರ ರೇಡ್ ಆದ ಸಫ್ಜರ್'ಜಂಗ್ ಎಂಕ್ಲೇವ್'ನಲ್ಲಿರುವ ಮನೆಯನ್ನು ದ್ವಾರಕಾನಾಥ್ ಅವರೆ ಆಯ್ಕೆ ಮಾಡಿದ್ದು. 1999ರಲ್ಲಿ ದೇವೇಗೌಡರ ಸಹಾಯದಿಂದ ಎಸ್.ಎಂ. ಕೃಷ್ಣ ರಾಜ್ಯಸಭಾ ಸದಸ್ಯರಾದ ನಂತರ ಹೈಕಮಾಂಡ್ ನಾಯಕರ ಮನೆ ಮನೆಗಳಿಗೆ ಎಡತಾಕಿ ರಾಜಶೇಖರ್ ಮೂರ್ತಿ ಬೇಡ ಕೃಷ್ಣರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಓಡಾಡಿದ್ದವರಲ್ಲಿ ಶಿವಕುಮಾರ್ ಕೂಡ ಒಬ್ಬರು . ರಾಜ್ಯದಲ್ಲಿ ಅಷ್ಟೇನು ಜನಪ್ರಿಯರಲ್ಲದ ಕೃಷ್ಣರನ್ನು ಅಧ್ಯಕ್ಷರನ್ನಾಗಿ ಮಾಡಿ ಏನು ಮಾಡುತ್ತೀರಿ ಎಂದು ಆಗಿನ ದೆಹಲಿಯ ಕನ್ನಡ ಪತ್ರಕರ್ತರು ಕೇಳಿದಾಗ ಶಿವಕುಮಾರ್ ಕೊಟ್ಟ ಉತ್ತರ 'ಜಾತಕ ತೋರಿಸಿದ್ದೇನೆ, ರೀ ಮುಂದೆ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಅದಕ್ಕೆ ಈಗಿನಿಂದಲೇ ಜೊತೆಗಿದ್ದೇನೆ'ಎಂದು ಉತ್ತರ ಕೊಟ್ಟಿದ್ದರಂತೆ.

- ಪ್ರಶಾತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ (ಕನ್ನಡಪ್ರಭ)