ನವದೆಹಲಿ (ಡಿ.15): ಕಪ್ಪುಹಣದ ವಿರುದ್ಧ ಸಮರ ನಡೆಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸುತ್ತಾ, ಜಾರಿ ನಿರ್ದೇಶನಾಲಯವು ಅಕ್ರಮವಾಗಿ ಶೇಖರಣೆಯಾಗಿರುವ ಹಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಹಣವನ್ನು ಮತ್ತೆ

ಚಲಾವಣೆಗೆ ಬಿಡಲಾಗುತ್ತದೆ. ನೀವಿದನ್ನು 'ಸರ್ಜಿಕಲ್ ಆ್ಯಕ್ಷನ್' ಎಂದು ಕರೆಯಬಹುದು ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿರುವ ನಕಲಿ ನೋಟುಗಳ ಬಗ್ಗೆ ಮಾತನಾಡುತ್ತಾ, ಹೊಸ 500 ಹಾಗೂ 2000 ದ ನೋಟುಗಳನ್ನು ನಕಲಿ ಮಾಡುವ ಸಾಧ್ಯತೆ ಕಡಿಮೆ. ಭದ್ರತಾ ಹಿತದೃಷ್ಟಿಯಿಟ್ಟುಕೊಂಡು ಮೊದಲ ಬಾರಿಗೆ ದೇಶಿಯವಾಗಿ ನೋಟುಗಳಿಗೆ ವಿನ್ಯಾಸ

ಮಾಡಲಾಗಿದೆ. ನೋಟುಗಳು ಹೆಚ್ಚು ಭದ್ರವಾಗಿದ್ದು ನಕಲಿ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಪ್ರಸ್ತುತ 500 ರ ಹೊಸ ನೋಟುಗಳನ್ನು ಮುದ್ರಿಸುವುದಕ್ಕೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ದಾಸ್ ಹೇಳಿದ್ದಾರೆ.