ಮುಝಫ್ಫರಪುರ, ಬಿಹಾರ (ಅ.06): ಮಾಜಿ ಕೇಂದ್ರ ಗೃಹಮಂತ್ರಿ ಪಿ. ಚಿದಂಬರಂ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹಾಗೂ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವಿರುದ್ಧ ಬಿಹಾರದ ಮುಝಫ್ಫರಪುರದ ನ್ಯಾಯಾಲಯದಲ್ಲಿ ದೆಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ದಾಳಿಗೆ ಸರ್ಕಾರ ಪುರಾವೆ ಒದಗಿಸಬೇಕೆಂದು ಈ ಮೂವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಜಗನ್ನಾಥ ಶಾ ಎಂಬವರು ಚೀಫ್ ಜ್ಯುಡಿಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಿಸಿದ್ದಾರೆ.

ಅ.19ರಂದು ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಲಿದೆ.