Asianet Suvarna News Asianet Suvarna News

‘I LOVE YOU, I MISS YOU ಫ್ರೀ ಇದ್ರೆ ಸಿಗ್ತೀರಾ’ ಎಂದು ಮೆಸೇಜ್ ಮಾಡಿದ್ದ ಪೋಲಿ ಸೆಕ್ಯೂರಿಟಿಗಾರ್ಡ್ ಅಂದರ್

ಉಪನ್ಯಾಸಕಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಪೋಲಿ ಸೆಕ್ಯುರಿಟಿ ಗಾರ್ಡ್'ನನ್ನು ಪೊಲೀಸರು ಬಂಧಿಸಿದ್ದಾರೆ. ದೂರಿನ ಮೇರೆಗೆ ವಿಚಾರಣೆ ನಡೆಸಿದ ಮಲ್ಲೇಶ್ವರಂ ಪೊಲೀಸರು ಸೆಕ್ಯೂರಿಟಿ ಗಾರ್ಡ್ ಮಹೇಂದ್ರನನ್ನು ಬಂಧಿಸಿದ್ದಾರೆ.

Security who sent dirty messages got arrested

ಬೆಂಗಳೂರು(ಜ.27): ಉಪನ್ಯಾಸಕಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಪೋಲಿ ಸೆಕ್ಯುರಿಟಿ ಗಾರ್ಡ್'ನನ್ನು ಪೊಲೀಸರು ಬಂಧಿಸಿದ್ದಾರೆ. ದೂರಿನ ಮೇರೆಗೆ ವಿಚಾರಣೆ ನಡೆಸಿದ ಮಲ್ಲೇಶ್ವರಂ ಪೊಲೀಸರು ಸೆಕ್ಯೂರಿಟಿ ಗಾರ್ಡ್ ಮಹೇಂದ್ರನನ್ನು ಬಂಧಿಸಿದ್ದಾರೆ.

ಈ ಪೋಲಿ ಸೆಕ್ಯೂರಿಡಿ ಗಾರ್ಡ್ ಇಂಟರ್​ನೆಟ್​ ಉಪಯೋಗಿಸಬೇಕು ಅಂತ ಕಾಲೇಜ್​​ ವಿದ್ಯಾರ್ಥಿಯ ಮೊಬೈಲ್ ಪಡೆದು, ಆ ನಂಬರ್'​ನಿಂದ ಉಪನ್ಯಾಸಕಿಯರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ. ಲವ್​ ಮಾಡ್ತೀರಾ? ಫ್ರಿ ಇದ್ದರೆ ಸಿಗ್ತಿರಾ? ಅಂತಾ ಮೆಸೇಜ್ ಕಳುಹಿಸಿದ್ದಾನೆ.

ಈ ಬಗ್ಗೆ ಜನವರಿ 13ರಂದು ಉಪನ್ಯಾಸಕಿಯರು ಮಲ್ಲೇಶ್ವರಂ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಸೆಕ್ಯೂರಿಟಿಗಾರ್ಡ್ ಕೃತ್ಯ ಬಯಲಾಗಿದೆ.

 

Follow Us:
Download App:
  • android
  • ios