ಕೇಂದ್ರ ಸರ್ಕಾರ ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕುಗಳ ಸುರಕ್ಷತೆಗಾಗಿ ಸರ್ಕಾರ ಸಾಕಷ್ಟು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ನವದೆಹಲಿ (ಮಾ.09): ಕೇಂದ್ರ ಸರ್ಕಾರ ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕುಗಳ ಸುರಕ್ಷತೆಗಾಗಿ ಸರ್ಕಾರ ಸಾಕಷ್ಟು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ನ.09 ರಿಂದ ಡಿ.30 ರವರೆಗಿನ ಎಲ್ಲಾ ವಿಡಿಯೋ ದಾಖಲೆಗಳನ್ನು ಕಾಯ್ದಿರಿಸಲು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳಿಗೆ ಆರ್ಬಿಐ ಸೂಚಿಸಿದೆ. ಸಿಸಿಟಿವಿ ಫೂಟೇಜಿನ ಹೊಣೆಯನ್ನು ಎಎನ್ ಜಿ ಇಂಡಿಯಾಗೆ ವಹಿಸಲಾಗಿತ್ತು. ಕೇವಲ 500 ಮಂದಿ ಸಿಬ್ಬಂದಿಗಳೊಂದಿಗೆ ದೇಶಾದ್ಯಂತ 10 ಸಾವಿರ ಕಡೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಹಾರ್ಡ್ ಡಿಸ್ಕನ್ನು 25 ದಿನಗಳೊಳಗೆ ಅಳವಡಿಸಿದೆ.

ಬ್ಯಾಂಕುಗಳಿಗೆ ಗುರುತಿಸುವುದು ದೊಡ್ಡ ಸವಾಲಾಗಿದೆ. ಹಾರ್ಡ್ ಡಿಸ್ಕನ್ನು ತಕ್ಷಣ ಬದಲಾವಣೆ ಮಾಡುವುದು ಹಾಗೂ ಕಡಿಮೆ ಅವಧಿಯಲ್ಲಿ ಡೇಟಾವನ್ನು ಸಲ್ಲಿಕೆ ಮಾಡುವುದು ಸವಾಲಾಗಿತ್ತು. ಆದರೆ ಅದನ್ನು ಯಶಸ್ವಿಯಾಗಿ ಎಎನ್ ಜಿ ಇಂಡಿಯಾ ಪೂರೈಸಿದೆ.