ಇಂದು ಬಾಗಲಕೋಟೆಯಲ್ಲಿ ನಡೆಯವ ರಾಹುಲ್ ಗಾಂಧಿಗೆ  ಸಮಾವೇಶಕ್ಕೆ ಭಾಗವಹಿಸಲು ಸಚಿವ ತಿಮ್ಮಾಪೂರ ಬಂದಿದ್ದರು. ಆದರೆ  ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಡಲೇ ಇಲ್ಲ. 

ಬಾಗಲಕೋಟೆ (ಫೆ.26): ಇಂದು ಬಾಗಲಕೋಟೆಯಲ್ಲಿ ನಡೆಯವ ರಾಹುಲ್ ಗಾಂಧಿಗೆ ಸಮಾವೇಶಕ್ಕೆ ಭಾಗವಹಿಸಲು ಸಚಿವ ತಿಮ್ಮಾಪೂರ ಬಂದಿದ್ದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಡಲೇ ಇಲ್ಲ. 

ಜಿಲ್ಲೆಯ ನವನಗರದಲ್ಲಿ ನಡೆಯೋ ರಾಹುಲ್ ಗಾಂಧಿ ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಭದ್ರತಾ ಸಿಬ್ಬಂದಿ ಒಳ ಬಿಟ್ಟಿಲ್ಲ. ಗಣ್ಯರ ಪಟ್ಟಿಯಲ್ಲಿ ಸಚಿವರ ಹೆಸರಿಲ್ಲದ್ದಕ್ಕೆ ಎಸ್.ಪಿ.ಜಿ ಭದ್ರತಾ ತಂಡ ತಿಮ್ಮಾಪುರ ಅವರನ್ನು ಒಳ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮುಜುಗರಕ್ಕೀಡಾಗಿದ್ದಾರೆ. ಕಾಂಗ್ರೆಸ್ ಕಾಯ೯ಕತ೯ರು ಸಮಾಜಾಯಿಷಿ ನೀಡಿ ಇವರು ಜಿಲ್ಲಾ ಉಸ್ತುವಾರಿ ಸಚಿವರೆಂದು ತಿಳಿ ಹೇಳಿದಾಗ ಒಳಗೆ ಬಿಟ್ಟಿದ್ದಾರೆ.