ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯರವರ ವಿಚಾರಣೆ ಜುಲೈ 10 ರಂದು ನಡೆಯಲಿದ್ದು, ಅವರು ಹಾಜರಾಗುವುದನ್ನು ಖಾತ್ರಿಪಡಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಗೃಹಸಚಿವಾಲಯಕ್ಕೆ ಸೂಚಿಸಿದೆ.

ನವದೆಹಲಿ (ಮೇ.10): ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯರವರ ವಿಚಾರಣೆ ಜುಲೈ 10 ರಂದು ನಡೆಯಲಿದ್ದು, ಅವರು ಹಾಜರಾಗುವುದನ್ನು ಖಾತ್ರಿಪಡಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಗೃಹಸಚಿವಾಲಯಕ್ಕೆ ಸೂಚಿಸಿದೆ.

ವಿಜಯ್ ಮಲ್ಯ ತಮ್ಮ ಸಂಪೂರ್ಣ ಆಸ್ತಿಯ ವಿವರವನ್ನು ಬಹಿರಂಗಪಡಿಸದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಬ್ರಿಟಿಷ್ ಕಂಪನಿ ಡಿಯಾಗೋಯಿಂದ ಪಡೆದ 40 ಮಿಲಿಯನ್ ಹಣವನ್ನು ತಮ್ಮ ಮೂವರು ಮಕ್ಕಳ ಖಾತೆಗೆ ಟ್ರಾನ್ಸ್ ಫರ್ ಮಾಡುವ ಮೂಲಕ ಕರ್ನಾಟಕ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಜುಲೈ 10 ರಂದು ನಡೆಯುವ ವಿಚಾರಣೆಯಲ್ಲಿ ಮಲ್ಯರವರ ಹಾಜರಾತಿಯನ್ನು ಖಾತ್ರಿಪಡಿಸುವಂತೆ ಗೃಹ ಲಾಖೆಗೆ ನಾವು ಸೂಚಿಸಿದ್ದೇವೆ. ತೀರ್ಪಿನ ನಕಲು ಪ್ರತಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ನ್ಯಾ. ಆದರ್ಶ್ ಕುಮಾರ್ ಹಾಗೂ ಉದಯ್ ಲಲಿತ್ ಪೀಠ ಹೇಳಿದೆ.