Asianet Suvarna News Asianet Suvarna News

ಓರಲ್ ಸೆಕ್ಸ್‌ಗೆ ಗಂಡ ಒತ್ತಾಯಿಸಿದರೆ ಕೇಸ್ ಹಾಕಬಹುದು

ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಸೆಕ್ಷನ್ 377 ರ ಅಡಿ ಅರ್ಜಿ ವಿಚಾರಣೆ ನಡೆಸಿ ನಿಸರ್ಗಕ್ಕೆ ವಿರುದ್ಧವಾದ ರೀತಿ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸುವುದು ಕಾನೂನು ಬಾಹಿರವಾಗಿದ್ದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದೆ.

Section 377 verdict nears, wife wants man booked for oral sex
Author
Bengaluru, First Published Jul 19, 2018, 12:08 PM IST

ನವದೆಹಲಿ[ಜು.19] ಗಂಡ ತನ್ನನ್ನು ಅಸುರಕ್ಷಿತ ಓರಲ್ ಸೆಕ್ಸ್ ಗೆ ಒತ್ತಾಯಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನು ವಿಚಾರಣೆ ಮಾಡಿದ ಎನ್.ವಿ.ರಮಣ, ಎಂ.ಎಂ.ಶಾಂತನಗೌಡರ್  ನಿಸರ್ಗಕ್ಕೆ ವಿರುದ್ಧವಾದ ರೀತಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದ್ದು ಮಹಿಳೆಯ ಪತಿಗೆ ನೋಟೀಸ್ ನೀಡಿದೆ.

5 ಜನ ನ್ಯಾಯಾಧೀಶರ ಪೀಠ ಅರ್ಜಿ ವಿಚಾರಣೆ ಮಾಡಿದ್ದು ಇದನ್ನು ಸೆಕ್ಷನ್ 377ರ ಅಡಿ ಅಪರಾಧ ಎಂದು ಭಾವಿಸಬಹುದಾಗಿದೆ. ಓರಲ್ ಸೆಕ್ಸ್ ನತ್ತು ಅನಲ್ ಸೆಕ್ಸ್ ನಿಸರ್ಗಕ್ಕೆ ವಿರುದ್ಧವಾಗಿದ್ದು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ.

ಫುಟ್ಬಾಲ್ ಚಾಂಪಿಯನ್ ಫ್ರಾನ್ಸ್‌ನಲ್ಲಿ ಎಲ್ಲಾ ಖುಲ್ಲಂ ಖುಲ್ಲಾ..!

2014ರಲ್ಲಿ ಮದುವೆಯಾಗಿದ್ದ ಗುಜರಾತಿನ ಮಹಿಳೆ ನ್ಯಾಯಾಲಕಕ್ಕೆ ದೂರು ಸಲ್ಲಿಸಿದ್ದರು. ವೈದ್ಯನಾಗಿರುವ ಗಂಡ ತನನ್ನು ಪ್ರಯೋಗಶಾಲೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದರು. ಮಹಿಳೆ ಸಲ್ಲಿಸಿದ ದೂರಿನ ಪರ ವಾದ ಮಾಡಿದ ಅಪರ್ಣಾ ಭಟ್, 15 ವರ್ಷದಲ್ಲಿದ್ದಾಗಲೇ ಮದುವೆಯಾಗಿದ್ದ ಆಕೆಯನ್ನು ಓರಲ್ ಸೆಕ್ಸ್ ಗೆ ಒತ್ತಾಯ ಮಾಡಲಾಗುತ್ತಿದ್ದು ನ್ಯಾಯಾಲಯದ ತೀರ್ಪು ಎಲ್ಲ ಮಹಿಳೆಯರ ಹಿತ ಕಾಪಾಡಿದೆ ಎಂದಿದ್ದಾರೆ.

Follow Us:
Download App:
  • android
  • ios