Asianet Suvarna News Asianet Suvarna News

ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಶತಾಯುಷ್ಯದ ಗುಟ್ಟೇನು?

ನಡೆದಾಡುವ ದೇವರು ಸ್ವರ್ಗಸ್ಥ | ಶಿವನ ಸೇವೆಗೆ ಹೊರಟ ಶತಮಾನದ ಸಂತ | ಶ್ರೀಗಳ ಶತಾಯುಷ್ಯದ ಗುಟ್ಟೇನು? ಹೇಗಿತ್ತು ಇವರ ದಿನಚರಿ ಇಲ್ಲಿದೆ ನೋಡಿ. 

Secret of  Tumkuru Siddaganga Shivakumara Swamy long life
Author
Bengaluru, First Published Jan 21, 2019, 4:52 PM IST

ತುಮಕೂರು (ಜ. 21): ಯುಗ ಪುರುಷ, ಲೋಕಜಂಗಮ ಯೋಗಿ ಸಿದ್ಧಗಂಗಾ ಶ್ರೀಗಳು ಶಿವನ ಕಡೆ ನಡಿಗೆ ಬೆಳೆಸಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿದರು ಶ್ರೀಗಳು. ಇವರ ಬದುಕೇ ಒಂದು ಆದರ್ಶ. ಆಧ್ಯಾತ್ಮದ ಮೇರು ಪರ್ವತವಾಗಿ ಬದುಕಿದವರು. ತ್ರಿವಿಧ ದಾಸೋಹಿಯಾಗಿ ಲೋಕಸೇವೆ ಮಾಡಿದವರು. 

ಶಿವಣ್ಣ-ಶಿವೈಕ್ಯರಾಗೋ ತನಕ: ನಡೆದಾಡುವ ದೇವರ ಜೀವನಗಾಥೆ...

ಶತಾಯುಷದ ಗುಟ್ಟೇನು?

ಶ್ರೀಗಳು ದಿನಕ್ಕೆ 3 ಬಾರಿ ಸ್ನಾನ ಮಾಡುತ್ತಿದ್ದರು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಶ್ರೀಗಳ ಚೈತನ್ಯಕ್ಕೆ, ಉತ್ಸಾಹಕ್ಕೆ ಕಾರಣವಾಗಿದ್ದುದು ಅವರ ದಿನಚರಿಯ ಆರಂಭದ ನೀರು. ಮಠದ ಆವರಣದಲ್ಲಿರುವ ಬಾವಿಯ ನೀರನ್ನು ಕುದಿಸಿ ಆರಿಸಿ ಕುಡಿಯುತ್ತಿದ್ದರು. ಇದೂ ಕೂಡಾ ಶತಾಯುಷ್ಯದ ಗುಟ್ಟು ಎನ್ನಲಾಗುತ್ತದೆ. 

ಎಲ್ಲವೂ ಶಿವಲೀಲೆ! ಶಿವಣ್ಣರಾಗಿದ್ದವರು ಸಿದ್ಧಗಂಗಾ ಶ್ರೀಗಳಾಗಿದ್ದೇ ಪವಾಡ

ಶ್ರೀಗಳು ಸರಳವಾದ ಆಹಾರವನ್ನು ಸೇವಿಸುತ್ತಿದ್ದರು.  ಬೇಳೆ ಸಾರೆಂದರೆ ಬಹಳ ಇಷ್ಟ.  ಆಹಾರದಲ್ಲಿ ಹಿತ,ಮಿತ ವ್ರತವನ್ನು ಪಾಲಿಸಿದವರು. ಇವರು ಸೇವಿಸುವ ಆಹಾರದಲ್ಲಿ ಸಮುದ್ರದ ಉಪ್ಪನ್ನು ಬಳಸುತ್ತಿರಲಿಲ್ಲ. ಬದಲಾಗಿ ಸೈಂಧವ ಲವಣವನ್ನು ಬಳಸುತ್ತಿದ್ದರು. ಇದು ಆರೋಗ್ಯಕ್ಕೆ ಒಳ್ಳೆಯದು. ಇನ್ನೂ ಒಂದು ಅಚ್ಚರಿ ಎಂದರೆ ಇವರ ಪೂರ್ವಾಶ್ರಮದ ಸಹೋದರ, ಸಹೋದರಿಯರೆಲ್ಲರೂ 90 ವರ್ಷದ ಮೇಲೆ ಬದುಕಿ ಬಾಳಿದವರು. ಅನುವಂಶೀಯತೆಯೂ ಒಂದು ಕಾರಣ ಎನ್ನುತ್ತದೆ ವಿಜ್ಞಾನ. 

ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು

ಇನ್ನು ಶ್ರೀಗಳು ಬೇವಿನ ಕಷಾಯವನ್ನು ಬಳಸುತ್ತಿದ್ದರು.  ಇದಕ್ಕೆ ಹಸುವಿನ ಹಾಲನ್ನು ಬಳಸಲಾಗುತ್ತದೆ. ಪ್ರತಿದಿನ ತಪ್ಪದೇ ಯೋಗ, ಪ್ರಾಣಾಯಾಮ ಮಾಡುತ್ತಿದ್ದರು. ದಿನಕ್ಕೆ ಅರ್ಧ ತಾಸಾದರೂ ಓದುತ್ತಿದ್ದರು. ಆರೋಗ್ಯಯುತವಾದ ಜೀವನ ಶೈಲಿಯನ್ನು ರೂಢಿಸಿಕೊಂಡು ಶತಾಯುಷವನ್ನು ಪೂರೈಸಿದ್ದಾರೆ ಶ್ರೀಗಳು.  

Follow Us:
Download App:
  • android
  • ios