ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ಯಾರು ನಿರ್ವಹಿಸುತ್ತಾರೆ? ಖುದ್ದು ರಾಹುಲ್ ಅವರೇ ಟ್ವೀಟ್ ಮಾಡುತ್ತಾರಾ? ಮೊನಚು ಟ್ವೀಟ್‌ಗಳು ಅವರಿಂದಲೇ ಪಡಿಮೂಡುತ್ತಿವೆಯಾ? ಎಂಬ ಎಲ್ಲ ಪ್ರಶ್ನೆಗಳಿಗೂ ಈಗ ಉತ್ತರ ಲಭಿಸಿದೆ.
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ಯಾರು ನಿರ್ವಹಿಸುತ್ತಾರೆ? ಖುದ್ದು ರಾಹುಲ್ ಅವರೇ ಟ್ವೀಟ್ ಮಾಡುತ್ತಾರಾ? ಮೊನಚು ಟ್ವೀಟ್ಗಳು ಅವರಿಂದಲೇ ಪಡಿಮೂಡುತ್ತಿವೆಯಾ? ಎಂಬ ಎಲ್ಲ ಪ್ರಶ್ನೆಗಳಿಗೂ ಈಗ ಉತ್ತರ ಲಭಿಸಿದೆ.
ರಾಹುಲ್ ಟ್ವೀಟರ್ ಖಾತೆಯನ್ನು ಮೂರರಿಂದ ನಾಲ್ಕು ಮಂದಿ ಇರುವ ತಂಡ ನೋಡಿಕೊಳ್ಳುತ್ತದೆ. ವಿವಿಧ ನಾಯಕರ ಜನ್ಮದಿನಕ್ಕೆ ಶುಭಾಶಯಗಳನ್ನು ಕೋರುವ ಟ್ವೀಟ್ಗಳನ್ನು ಈ ತಂಡವೇ ಮಾಡುತ್ತದೆ.
ರಾಹುಲ್ ಆ ವಿಷಯದಲ್ಲಿ ತಲೆ ಹಾಕುವುದಿಲ್ಲ. ಆದರೆ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ರಾಹುಲ್ ಅವರು ಸಲಹೆ ನೀಡುತ್ತಾರೆ. ಆ ಬಗ್ಗೆ ತಂಡದೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ಸ್ಪರ್ಶ ನೀಡುತ್ತಾರೆ. ಬಳಿಕ ಅದನ್ನು ಟ್ವೀಟ್ ಮಾಡಲಾಗುತ್ತದೆ. ಅದಕ್ಕೆ ಮಾಹಿತಿಯನ್ನು ಸ್ವತಃ ರಾಹುಲ್ ಅವರೇ ನೀಡುತ್ತಾರೆ.
ಗುಜರಾತ್ ಪ್ರವಾಸದಲ್ಲಿರುವ ಖುದ್ದು ರಾಹುಲ್ ಗಾಂಧಿ ಅವರೇ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ತಮ್ಮ ಪರ ತಮ್ಮ ಪ್ರೀತಿಯ ನಾಯಿಮರಿ ಪಿಡಿ ಮಾಡುತ್ತದೆ ಎಂದು ನಗೆ ಚಟಾಕಿ ಹಾರಿಸಿದ್ದರು.
