Asianet Suvarna News Asianet Suvarna News

ಫ್ರಾನ್ಸ್'ನಲ್ಲಿ ಬೋಸ್ ಸಾವಿನ ರಹಸ್ಯ..?

ಬೋಸ್ ಸಾವಿನ ಹಿಂದಿನ ನಿಗೂಢತೆಯನ್ನು ಬಹಿರಂಗ ಪಡಿಸಬಹುದೆಂದು ನಂಬಲಾದ ಫ್ರೆಂಚ್ ಸೇನೆಯ ಗುಪ್ತ ಕಡತಗಳನ್ನು ಬಹಿರಂಗ ಪಡಿಸಲು ಅಲ್ಲಿನ ರಾಷ್ಟ್ರೀಯ ದಾಖಲೆಗಳ ಪ್ರಾಧಿಕಾರ ನಿರಾಕರಿಸಿದೆ. ಕಡತವು 100 ವರ್ಷಗಳ ಅವಧಿಗೆ ಮುಚ್ಚಿರಬೇಕು ಎಂಬ ನಿಯಮ ಇರುವುದರಿಂದ ಅವುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

Secret File That Could unravel Mystery Of Netaji Deth

ಚೆನ್ನೈ(ಡಿ.1): ಸುಭಾಶ್ಚಂದ್ರ ಬೋಸ್ ಸಾವಿನ ಹಿಂದಿನ ನಿಗೂಢತೆಯನ್ನು ಬಹಿರಂಗ ಪಡಿಸಬಹುದೆಂದು ನಂಬಲಾದ ಫ್ರೆಂಚ್ ಸೇನೆಯ ಗುಪ್ತ ಕಡತಗಳನ್ನು ಬಹಿರಂಗ ಪಡಿಸಲು ಅಲ್ಲಿನ ರಾಷ್ಟ್ರೀಯ ದಾಖಲೆಗಳ ಪ್ರಾಧಿಕಾರ ನಿರಾಕರಿಸಿದೆ. ಕಡತವು 100 ವರ್ಷಗಳ ಅವಧಿಗೆ ಮುಚ್ಚಿರಬೇಕು ಎಂಬ ನಿಯಮ ಇರುವುದರಿಂದ ಅವುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.

ಪ್ಯಾರಿಸ್ ಮೂಲದ ಇತಿಹಾಸಕಾರ ಜೆ.ಬಿ.ಪಿ. ಮೋರ್ ಈ ಗೌಪ್ಯ ಕಡತಗಳನ್ನು ಪಡೆಯಲು ಪ್ರಯತ್ನಿಸಿದ್ದರು. ವರ್ಷಗಳ ಸಂಶೋಧನೆಯ ಬಳಿಕ, ಫ್ರೆಂಚ್ ಗುಪ್ತಚರ ಸೇವೆ ದಾಖಲೆಗಳ ಆಧಾರದಲ್ಲಿ ಬಹುಶಃ ವಿಯೆಟ್ನಾಂನ ಸಾಯ್ಗಾನ್‌'ನ ಬಾಟ್ ಕ್ಯಾಟಿನಾಟ್ ಜೈಲಿನಲ್ಲಿ ಬೋಸ್‌'ರ ಜೀವನ ಕೊನೆಯಾಯಿತು ಎಂದು ದೃಢಪಡಿಸಬಹುದು. ಸಾಯ್ಗಾನ್‌'ನಲ್ಲಿ ಬೋಸ್ ಮತ್ತು ಐಎನ್‌'ಎಗೆ ಸಂಬಂಧಿಸಿ ಒಂದೇ ಕಡತದ ಬಗ್ಗೆ ತಿಳಿಯಲು ಫ್ರೆಂಚ್ ಆಡಳಿತ ಅವಕಾಶ ನೀಡುತ್ತಿಲ್ಲ. ಇದು ಆಶ್ಚರ್ಯವನ್ನುಂಟು ಮಾಡಿದೆ. ಇದು 1945ರ ಸೆಪ್ಟಂಬರ್‌'ನಲ್ಲಿ ಸಾಯ್ಗಾನ್‌'ನಲ್ಲಿ ಬೋಸ್‌'ರ ಜೀವನ ಕೊನೆಯಾಯಿತು ಎಂಬ ನನ್ನ ಸಂಶಯವನ್ನು ದೃಢಪಡಿಸುತ್ತದೆ.

ಹೀಗಾಗಿಯೇ ಈ ಕಡತವನ್ನು 100 ವರ್ಷಗಳವರೆಗೆ ಬಹಿರಂಗಗೊಳಿಸಲಾಗುತ್ತಿಲ್ಲ ಎಂದು ಮೋರ್ ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಫ್ರೆಂಚ್ ಗುಪ್ತಚರ ಸೇವಾ ವರದಿಯ ಆಧಾರದಲ್ಲಿ ಬೋಸ್ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ. ಭಾರತ ಸರ್ಕಾರ ಈ ಗೌಪ್ಯ ಕಡತ ಬಹಿರಂಗಕ್ಕೆ ಫ್ರೆಂಚ್ ಸರ್ಕಾರವನ್ನು ಒತ್ತಾಯಿಸಬೇಕು ಎಂದಿದ್ದಾರೆ.

Follow Us:
Download App:
  • android
  • ios