ದೇವನಹಳ್ಳಿ ಸಮೀಪದ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್’ನಲ್ಲಿ ನಿಗದಿಯಾಗಿದ್ದ ಬಿಜೆಪಿ ಸಭೆ ಕೊನೆ ಕ್ಷಣದಲ್ಲಿ ಬೇರೆಡೆಗೆ ಸ್ಥಳಾಂತರ
ಬೆಂಗಳೂರು: ದೇವನಹಳ್ಳಿ ಸಮೀಪದ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್’ನಲ್ಲಿ ನಿಗದಿಯಾಗಿದ್ದ ಬಿಜೆಪಿ ಸಭೆಯನ್ನು ಕೊನೆ ಕ್ಷಣದಲ್ಲಿ ಅಮಿತ್ ಶಾ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್’ನಲ್ಲಿ ನಡೆಯಬೇಕಿದ್ದ ಸಭೆಯನ್ನು ಯಲಹಂಕ ಸಮೀಪದ ರಾಯಲ್ ಆರ್ಕಿಡ್ ಹೋಟೆಲ್’ಗೆ ದಿಢೀರ್ ಶಿಫ್ಟ್ ಮಾಡಲಾಗಿದೆ.
ಎಕ್ಸೋಟಿಕಾ ರೆಸಾರ್ಟ್’ನಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾಲುದಾರಿಕೆ ಇದೆ ಎಂಬ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಮತ್ತು ಕೋರ್ ಟೀಂ ಮಾಹಿತಿ ಸೋರಿಕೆಯಾಗಬಹುದೆಂಬ ಭೀತಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ.
ಆದುದರಿಂದ ಬಿಜೆಪಿ ನಾಯಕರು ನಿನ್ನೆ ಸಂಜೆಯೇ ರಾಯಲ್ ಆರ್ಕಿಡ್ ಹೋಟೆಲ್’ನ್ನು ಸಭೆಗಾಗಿ ಬುಕ್ ಮಾಡಿದ್ದಾರೆ.
