ನಿತ್ಯ ಬೆಲ್ ಬಾರಿಸಿ ಕೆಲಸ ಸಂಗ್ರಹಿಸುತ್ತಿದ್ದ 42 ಪೌರ ಕಾರ್ಮಿಕರು ಇವತ್ತು ಅವರು ಬೆಲ್ ಬಾರಿಸಲ್ಲ. ಕಸವೂ ಸಂಗ್ರಹಿಸಲ್ಲ. ಆದ್ರೂ ಅವರಿಗೆ ಇವತ್ತು ವಿಮಾನದ ಪ್ರಯಾಣ ಭಾಗ್ಯವಿದೆ. ಏನಿದು ವಿಮಾನ ಪ್ರಯಾಣ ಭಾಗ್ಯ ಅಂತೀರಾ ಈ ವರದಿ ನೋಡಿ.
ಬೆಂಗಳೂರು: ರಾಜ್ಯದ ಪೌರ ಕಾರ್ಮಿಕರಿಗೆ ಇದೀಗ ರಾಜ್ಯ ಸರ್ಕಾರ ವಿದೇಶ ಪ್ರವಾಸದ ಭಾಗ್ಯವನ್ನ ಕಲ್ಪಿಸಿದೆ. ರಾಜ್ಯದ ನಾನಾ ಜಿಲ್ಲೆಗಳ ಸುಮಾರು 1 ಸಾವಿರ ಪೌರ ಕಾರ್ಮಿಕರಿಗೆ ಸಿಂಗಾಪುರ್ ಪ್ರವಾಸ ಭಾಗ್ಯ ನೀಡಲಾಗಿದ್ದು ಅದರಲ್ಲಿ ಮೊದಲ ಹಂತದ 40 ಮಂದಿ ಪ್ರವಾಸ ಮುಗಿಸಿ ಬಂದಿದ್ದಾರೆ. ಜುಲೈ 4 ರಿಂದ ಜುಲೈ 8ರವರೆಗೆ ಸಿಂಗಪುರ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ. ಇವತ್ತು ಎರಡನೇ ತಂಡ ಪ್ರವಾಸ ಹೊರಟಿದ್ದು, 42 ಮಂದಿ ಪೌರಕಾರ್ಮಿಕರ ಸಿಂಗಾಪುರ್ ಪ್ರವಾಸಕ್ಕೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಶುಭ ಕೋರಿದ್ರು.
ನಗರಗಳಲ್ಲಿನ ಸ್ವಚ್ಛತೆ ಕಾಪಾಡೋದು ಹೇಗೆ..? ನೂತನ ವಿಧಾನಗಳೇನು..? ‘ಮ್ಯಾನ್‌ಹೋಲ್ ಸ್ವಚ್ಛತೆಗೆ ವಿದೇಶಗಳಲ್ಲಿ ಬಳಸುತ್ತಿರುವ ಹೊಸ ವಿಧಾನಗಳ ಪರಿಚಯಿಸಲು ಸರ್ಕಾರ ಸಿಂಗಾಪುರ್ ಟೂರ್ ಭಾಗ್ಯ ಕಲ್ಪಿಸಿದ್ದು, ಪ್ರತಿಯೊಬ್ಬ ಕಾರ್ಮಿಕರಿಗೆ 75 ಸಾವಿರ ರೂಪಾಯಿ ಖರ್ಚುನ್ನು ಸರ್ಕಾರ ಭರಿಸುತ್ತಿದೆ. ಸರ್ಕಾರ ಕಲ್ಪಿಸಿದ ಪ್ರವಾಸ ಭಾಗ್ಯ ಪೌರ ಕಾರ್ಮಿಕರಿಗೆ ಸಂತಸ ತರಿಸಿದೆ.
ಒಟ್ಟಿನಲ್ಲಿ, ರಾಜ್ಯದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಸ್ವಚ್ಛತಾ ವಿಧಾನಕ್ಕೆ ಹೈಟೆಕ್ ಟಚ್ ನೀಡಲು ಸರ್ಕಾರವು ಪೌರ ಕಾರ್ಮಿಕರಿಗೆ ಪ್ರವಾಸ ಭಾಗ್ಯ ನೀಡಿದೆ. ಈ ಪ್ರವಾಸದಲ್ಲಿ ಅದೇನೇನು ಅಧ್ಯಯನ ಮಾಡಿ ಬರ್ತಾರೋ ಗೊತ್ತಿಲ್ಲ, ಪೌರ ಕಾರ್ಮಿಕರಿಗೆ ಒಂದು ರಿಲ್ಯಾಕ್ಸ್ ಗ್ಯಾರಂಟಿ.
- ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್
