15 ವರ್ಷ ಅಜ್ಞಾತವಾಸ ಅನುಭವಿಸಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಗೀತಾ ಪೋಷಕರನ್ನು ಪತ್ತೆ ಹಚ್ಚಲು ದೇಶದ ನಾಗರೀಕರು ಸಹಾಯ ಮಾಡಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮನವಿ ಮಾಡಿದ್ದಾರೆ.
ನವದೆಹಲಿ(ಅ.02): 15 ವರ್ಷ ಅಜ್ಞಾತವಾಸ ಅನುಭವಿಸಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಗೀತಾ ಪೋಷಕರನ್ನು ಪತ್ತೆ ಹಚ್ಚಲು ದೇಶದ ನಾಗರೀಕರು ಸಹಾಯ ಮಾಡಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮನವಿ ಮಾಡಿದ್ದಾರೆ.
ಗೀತಾ ಪೋಷಕರನ್ನು ಪತ್ತೆಗೆ ಸಹಾಯ ಮಾಡಿದವರಿಗೆ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದರು. ಗೀತಾ ಭಾರತಕ್ಕೆ ಬಂದು ಎರಡು ವರುಷ ಕಳೆದರೂ ಗೀತಾ ಪೋಷಕರ ಸುಳಿವು ಸಿಕ್ಕಿಲ್ಲ.
ಗೀತಾ ಕಿವುಡ ಹಾಗೂ ಮೂಕ ಯುವತಿಯಾಗಿದ್ದು, ಆಕೆಯ ಪೋಷಕರ ಪತ್ತೆ ಸಹಾಯ ಮಾಡುವುದು ಪ್ರತಿಯೊಬ್ಬನ ಕರ್ತವ್ಯ ಎಂದು ಮನವಿ ಮಾಡಿದ್ದಾರೆ.
