ತನ್ನ ಪೊಲೀಸ್ ಅಧಿಕಾರಿಣಿ ಪತ್ನಿ ವಿರುದ್ಧ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದಕ್ಕೆ ಪತಿ ಮಹಾಶಯ ವರದಿಗಾರನಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಮಹಿಳಾ ಠಾಣಾ ಇನ್ಸ್’ಪೆಕ್ಟರ್ ಪಾರ್ವತಮ್ಮ ವಿರುದ್ಧ ವಾರಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ ವರದಿಗಾರ ಬಾಬುಖಾನ್’ಗೆ ಆಕೆಯ ಪತಿ ನಾಗರಾಜ್ ಯಾದವ್ ಅವಾಚ್ಚ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.

ತುಮಕೂರು: ತನ್ನ ಪೊಲೀಸ್ ಅಧಿಕಾರಿಣಿ ಪತ್ನಿ ವಿರುದ್ಧ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದಕ್ಕೆ ಪತಿ ಮಹಾಶಯ ವರದಿಗಾರನಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುಮಕೂರಿನ ಮಹಿಳಾ ಠಾಣಾ ಇನ್ಸ್’ಪೆಕ್ಟರ್ ಪಾರ್ವತಮ್ಮ ವಿರುದ್ಧ ವಾರಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ ವರದಿಗಾರ ಬಾಬುಖಾನ್’ಗೆ ಆಕೆಯ ಪತಿ ನಾಗರಾಜ್ ಯಾದವ್ ಅವಾಚ್ಚ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.

ಪಾರ್ವತಮ್ಮ ದೂರು ನೀಡಲು ಬಂದವರ ಮುಂದೆ ದರ್ಪ ತೋರಿಸ್ತಾರೆ ,ಅವರನ್ನೇ ಹೆದರಿಸ್ತಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿತ್ತು. ಹಾಗಾಗಿ ವರಿದಗಾರನನ್ನು ನಾಗರಾಜ್ ಗನ್’ನಿಂದ ಶೂಟ್ ಮಾಡುವುದಾಗಿ ಬೆದರಿಸಿದ್ದಾನೆ.

ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಗಾರ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದಾಗ, ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ.